ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವಿವಾಧಾತ್ಮಕ ಹೇಳಿಕೆಯನ್ನು ನೀಡಿದ ರೋಷನ್ ಬೇಗ್ ಅವರಿಗೆ ಕೆಪಿಸಿಸಿ ಕಚೇರಿಯಿಂದ ದಿನೇಶ್ ಗುಂಡೂರಾವ್ ಅವರು ನೋಟೀಸ್ ನೀಡಿದ್ದು, ಕೆಪಿಸಿಸಿ ವತಿಯಿಂದ ರೋಷನ್ ಬೇಗ್ ಅವರಿಗೆ, ಅವರ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ನಾಯಕರಿಗೆ ಮುಜುಗರ ತರುವಂತಹ ಹೇಳಿಕೆಗಳಿಗೆ ಕಾರಣ ಕೇಳಿ ನೋಟೀಸ್ ಜಾರಿ ಮಾಡುತ್ತಿದ್ದೇವೆ. ಮಾಧ್ಯಮಗಳಲ್ಲಿ ಬಾಯಿಗೆ ಬಂದಂತೆ ನಾಯಕರನ್ನು ಬಫೂನ್, ಆರೋಗೆಂಟ್ ಹಾಗೂ ಪ್ಲಾಫ್ ಷೋ ಎಂಬ ಪದಗಳನ್ನು ಬಳಸಿ ಹೇಳಿಕೆಯನ್ನು ನೀಡಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಪಕ್ಷಕ್ಕೆ ಮುಜುಗರವಾಗುವಂತೆ ತಾವುಗಳು ಮಾಧ್ಯಮಗಳಿಗೆ ಹೇಳಿಕೆಗಳನ್ನು ನೀಡಿರುವುದು ಹಾಗೂ ತಮ್ಮ ಅಸಮಾಧಾನವನ್ನು ಸಾರ್ವಜನಿಕವಾಗಿ ಮಾಧ್ಯಮಗಳ ಮೂಲಕ ವ್ಯಕ್ತಪಡಿಸಿ ಪಕ್ಷದ ತತ್ವ-ಸಿದ್ದಾಂತಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದೀರಿ. ತಮ್ಮ ಈ ನಡೆಯಿಂದ ಪಕ್ಷದ ಘನತೆ-ಗೌರವಗಳಿಗೆ ಕುಂದುಂಟಾಗಿದೆ. ತಮ್ಮ ಈ ನಡವಳಿಕೆ ಪಕ್ಷ ವಿರೋಧಿ ಚಟುವಟಿಕೆಯಾಗಿದ್ದು, ಗಂಭೀರವಾಗಿ ಪರಿಗಣಿಸಲಾಗುತ್ತದೆ. ನಿಮ್ಮ ಮೇಲೆ ಮುಂದಿನ ಶಿಸ್ತು ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದು ರೋಷನ್ ಬೇಗ್ ಅವರಿಗೆ ನೋಟೀಸ್ ನೀಡಿದ್ದು, ಈ ಬಗ್ಗೆ ಕಾಂಗ್ರೆಸ್ ಕರ್ನಾಟಕ ಟ್ವೀಟ್ ಮಾಡಿದೆ.