ಕಾನೂನು ಬಾಹಿರವಾಗಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಕೋಟ ಪೊಲೀಸರು ದಾಳಿ-ಏಳು ಮಂದಿ ಬಂಧನ, ರೂ1.72 ಲಕ್ಷ ಸೊತ್ತು ವಶ…

203
firstsuddi

ಕೋಟ: ಕೋಟ ಠಾಣಾ ವ್ಯಾಪ್ತಿಯ ಕಾವಡಿ ಹೌರಾಲ ಬಳಿಯ ಮಹಾಲಿಂಗೇಶ್ವರ ದೇವಸ್ಥಾನದ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರವಾಗಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಕೋಟ ಪೊಲೀಸರು ದಾಳಿ ನಡೆಸಿ, 7 ಮಂದಿಯನ್ನು ಬಂಧಿಸಿ ಸುಮಾರು 1. 72 ಲಕ್ಷ ರೂ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಮಧುಕರ(33), ಜಯರಾಮ ಶೆಟ್ಟಿ(49), ಪ್ರಶಾಂತ (42), ರಾಘವೇಂದ್ರ (39),  ಲೊಕೇಶ್ ಬಾರ್ಕೂರ (35), ಸುಧಾಕರ( 39), ಸುಕೇತ (29) ಎಂದು ಗುರುತಿಸಲಾಗಿದೆ.

ಕೋಟ ಠಾಣಾ ವ್ಯಾಪ್ತಿಯ ಕಾವಡಿ ಹೌರಾಲ ಬಳಿಯ ಮಹಾಲಿಂಗೇಶ್ವರ ದೇವಸ್ಥಾನದ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರವಾಗಿ ನಡೆಯುತ್ತಿದ್ದ ಕೋಳಿ ಅಂಕಕ್ಕೆಖಚಿತ ಮಾಹಿತಿ ಮೇರೆ ದಾಳಿ ನಡೆಸಿ 7 ಮಂದಿಯನ್ನು ಬಂಧಿಸಿ ಅವರಿಂದ ನಗದು 6880, ರೂ 1000 ಮೌಲ್ಯದ 2 ಕೋಳಿ, 8 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡು ಒಟ್ಟು ಮೌಲ್ಯ ರೂ 1.72 ಲಕ್ಷ ಆಗಿರುತ್ತದೆ. ದಾಳಿಯ ವೇಳೆ ಇಬ್ಬರು ವಾಹನವನ್ನು ಬಿಟ್ಟು ಓಡಿಹೋಗಿರುತ್ತಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.