ಕಾರಿಗೆ ಅಪರಿಚಿತ ವಾಹನ ಡಿಕ್ಕಿ-7 ಮಂದಿ ಧಾರುಣ ಸಾವು…

124
firstsuddi

ಹೈದರಾಬಾದ್ : ಕಾರಿಗೆ ಅಪರಿಚಿತ ವಾಹನ ಡಿಕ್ಕಿಯಾಗಿ 7 ಮಂದಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಮುತ್ತಂಗಿ ಬಳಿಯ ಒ.ಆರ್.ಆರ್ ರಿಂಗ್ ರಸ್ತೆಯಲ್ಲಿ ನಡೆದಿದೆ. ಜಾರ್ಖಂಡ್ ಮೂಲದ ಮೃತರು ಕಾರಿನಲ್ಲಿ ಒಟ್ಟು 10 ಮಂದಿ ಹೈದರಾಬಾದ್ ನ ಗಚ್ಚಿಬೌಲಿಯಿಂದ ಜಾರ್ಖಂಡ್ ಗೆ ತೆರಳುತ್ತಿದ್ದ ವೇಳೆ ಪಾಟಿ ಗ್ರಾಮದ ಸಮೀಪ ಕಾರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ 7 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನುಳಿದ ಮೂವರು ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.