ಕಾರು-ಬೈಕ್ ನಡುವೆ ಅಪಘಾತ; ದಂಪತಿ ಸ್ಥಳದಲ್ಲೇ ಸಾವು…

50
firstsuddi

ಚಿಕ್ಕಬಳ್ಳಾಪುರ: ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ನಾಯಿಂದ್ರಹಳ್ಳಿ ಬಳಿ ನಡೆದಿದೆ.

ಸುಬ್ರಮಣಿ(55), ಗಾಯತ್ರಮ್ಮ(50) ಮೃತ ರ್ದುದೈವಿಗಳು. ಮೃತ ದಂಪತಿ ಕೋಲಾರ ತಾಲೂಕಿನ ಕ್ಯಾಲನೂರು ನಿವಾಸಿಗಳಾಗಿದ್ದು, ನಾಯಿಂದ್ರಹಳ್ಳಿ ಗ್ರಾಮದಲ್ಲಿನ ತಿಥಿ ಕಾರ್ಯಕ್ರಮವೊಂದಕ್ಕೆ ಹೊರಟಿದ್ದರು. ಈ ವೇಳೆ ಅತೀ ವೇಗವಾಗಿ ಬಂದ ಕಾರು ಬೈಕ್‍ಗೆ ಡಿಕ್ಕಿ ಹೊಡೆದು ಈ ದುರ್ಘಟನೆ ನಡೆದಿದೆ.

ಈ ಕುರಿತು ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.