ಕಾಲೇಜು ಪ್ರಾಂಶುಪಾಲರ ಕಪಾಳಕ್ಕೆ ಹೊಡೆದ ಜೆಡಿಎಸ್ ಶಾಸಕ.

76
firstsuddi

ಮಂಡ್ಯ : ಐಟಿಐ ಕಾಲೇಜಿನ ಪ್ರಾಂಶುಪಾಲರಿಗೆ ಮಂಡ್ಯ ಕ್ಷೇತ್ರದ ಜೆಡಿಎಸ್ ಶಾಸಕ ಎಂ.ಶ್ರೀನಿವಾಸ್ ಅವರು ಕಪಾಳ ಮೋಕ್ಷ ಮಾಡಿದ್ದಾರೆ.

ಮಂಡ್ಯದ ಐಟಿಐ ಕಾಲೇಜಿನಲ್ಲಿ ನಿನ್ನೆ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇಲ್ಲಿಗೆ ಶಾಸಕ ಎಂ.ಶ್ರೀನಿವಾಸ್ ಆಗಮಿಸಿದ್ದರು. ಈ ವೇಳೆ, ಕಾಲೇಜಿನ ವ್ಯವಸ್ಥೆ ಬಗ್ಗೆ ಸರಿಯಾಗಿ ಮಾಹಿತಿ ನೀಡಲಿಲ್ಲ ಎಂಬ ಕಾರಣಕ್ಕೆ ಗರಂ ಆದ ಶಾಸಕರು ಎಲ್ಲರ ಎದುರೇ ಪ್ರಿನ್ಸಿಪಾಲ್ ನಾಗನಂದ್ ಅವರ ಕಪಾಳಕ್ಕೆ ಎರಡು ಬಾರಿ ಹೊಡೆದಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಶಾಸಕರ ವರ್ತನೆಗೆ ಸಾರ್ವಜನಿಕರಿಂದ ಟೀಕೆ ವ್ಯಕ್ತವಾಗಿದೆ.