ರಾಯಚೂರು: ಕುಡಿಯುವ ನೀರಿನ ಶುದ್ಧೀಕರಣ ಘಟಕದಲ್ಲಿ ಶ್ವಾನದ ಮೃತದೇಹ ಪತ್ತೆಯಾಗಿರುವ ಘಟನೆ ಜಿಲ್ಲೆಯ ಬಿಚ್ಚಾಲಿ ಗ್ರಾಮದಲ್ಲಿ ನಡೆದಿದೆ. ಒಟ್ಟು 17 ಗ್ರಾಮಗಳಿಗೆ ನೀರನ್ನು ಪೂರೈಸಲಾಗುವ ಶುದ್ದೀಕರಣ ಘಟಕದಕಲ್ಲಿ ಈ ಘಟನೆ ನಡೆದಿದ್ದು, ನೀರನ್ನು ಕುಡಿದ ಜನರು ಆತಂಕ ಕೊಳಗಾಗಿದ್ದಾರೆ. ಕಳೆದ 3 ದಿನಗಳ ಹಿಂದೆ ಶ್ವಾನ ಸತ್ತು ಬಿದ್ದಿದ್ದು, ನೀರು ಕುಡಿದ ಜನರಲ್ಲಿ ವಾಂತಿ ಭೇದಿ ಅನುಭವ ಉಂಟಾಗಿದೆ. ಗ್ರಾಮಸ್ಥರು ನೀರಿನ ಟ್ಯಾಂಕರ್ ಶುದ್ಧೀಕರಿಸುವಂತೆ ಆಗ್ರಹಿಸಿದ್ದಾರೆ. ಗ್ರಾಮ ಪಂಚಾಯಿತಿ ಸಿಬ್ಬಂದಿಯವರ ನಿರ್ಲಕ್ಷ್ಯವೇ ಇದಕ್ಕೆ ಕಾರಣ. ಸಂಪೂರ್ಣವಾಗಿ ಪಾಚಿಗಟ್ಟಿದ ನೀರನ್ನೇ ಜನರಿಗೆ ಕುಡಿಯಲು ಸಿಬ್ಬಂದಿಯವರು ಸರಬರಾಜು ಮಾಡುತ್ತಿದ್ದಾರೆ. ನೀರಿನ ಶುದ್ಧೀಕರಣ ಘಟಕ ನಿರ್ವಹಣೆಗೆ ವರ್ಷಕ್ಕೆ ಲಕ್ಷಾಂತರ ಅನುದಾನವಿದ್ದರೂ ಗ್ರಾಮ ಪಂಚಾಯಿತಿ ಸಿಬ್ಬಂದಿಯವರು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.










