ಮೂಡಿಗೆರೆ : ತಾಲ್ಲೂಕಿನ ದಾರದಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಮೂಡಿಗೆರೆ ತಾಲ್ಲೂಕಿನ ಕೆಂಪೇಗೌಡ ಒಕ್ಕಲಿಗರ ವೇದಿಕೆಯಿಂದ ಕ್ರೀಡಾ ಸಮವಸ್ತ್ರವನ್ನು ತಾಲ್ಲೂಕು ಅಧ್ಯಕ್ಷ ಬ್ರಿಜೇಶ್ ಕಡಿದಾಳ್ ವಿತರಿಸಿದರು.
ನಂತರ ಮಾತನಾಡಿದ ಅವರು ಸರ್ಕಾರಿ ಶಾಲೆ ಎಂದರೆ ಅಸಡ್ಡೆ ತೋರುವ ಬದಲು ಆ ಶಾಲೆಗೆ ತಮ್ಮ ಕೈಲಾದ ಕೊಡುಗೆ ನೀಡಿದರೆ ಆ ಶಾಲೆಯು ಮುಂದೆ ಬರುತ್ತದೆ ಎನ್ನುವುದಕ್ಕೆ ದಾರದಹಳ್ಳಿ ಸರ್ಕಾರಿ ಶಾಲೆಯೇ ಒಂದು ಉದಾಹರಣೆಯಾಗಿದೆ ಎಂದರು. ಸರ್ಕಾರಿ ಶಾಲೆಯಲ್ಲಿ ಬಹುತೇಕ ವಿದ್ಯಾರ್ಥಿಗಳು ಬಡವರೆ ಓದುತ್ತಿದ್ದರೂ, ಶಾಲೆಯ ಆಟೋಟದಲ್ಲೂ ಭಾಗವಹಿಸಿ ಪ್ರಶಸ್ತಿಗಳ ಗರಿಯನ್ನು ಮುಡಿಗೇರಿಸಿಕೊಳ್ಳುವುದರ ಮೂಲಕ ಸರ್ಕಾರಿ ಶಾಲೆ ಯಾವ ಖಾಸಗಿ ಶಾಲೆಗಿಂತಲೂ ಏನು ಕಡಿಮೆ ಇಲ್ಲಾ ಎಂಬುವುದನ್ನು ಸಾಬೀತು ಪಡಿಸುತ್ತಿದ್ದು. ಇದು ಗ್ರಾಮಕ್ಕೆ ಹೆಮ್ಮೆಯ ಗರಿಯಾಗಿದೆ ಎಂದರು.
ಕರ್ಣಾಟಕ ಧ್ವನಿ ಸಂಘದ ಸಂಸ್ಥಾಪಕ ಅಧ್ಯಕ್ಷ ಹಾಗೂ ಪತ್ರಕರ್ತ ರಾಘವೇಂದ್ರ ಕೆಸವಳಲೂ ಮಾತನಾಡಿ. ಇತ್ತೀಚೆಗೆ ಮಾಕೋನಹಳ್ಳಿಯಲ್ಲಿ ನಡೆದ ಮೂಡಿಗೆರೆ ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ದಾರದಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದು ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ. ಕ್ರೀಡೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದಲ್ಲಿ ತಮ್ಮ ಸ್ವಂತ ಖರ್ಚಿನಲ್ಲೆ ಅವರನ್ನು ಕ್ರೀಡೆಗೆ ಕಳಿಸುವುದಾಗಿ ತಿಳಿಸಿದರು. ಈ ಶಾಲೆಯಲ್ಲಿ ದೈಹಿಕ ಶಿಕ್ಷಕರಿಲ್ಲದೆ ಇದ್ದರು ಮುಖ್ಯ ಶಿಕ್ಷಕರು ಮತ್ತು ಸಹಶಿಕ್ಷಕರುಗಳ ಸಹಕಾರದಿಂದ ವಿದ್ಯಾರ್ಥಿಗಳು ಪ್ರಶಸ್ತಿಯನ್ನು ತಂದಿರುವುದು ಹೆಮ್ಮೆಯ ಸಂಗತಿಯಾಗಿದೆ. ಜನಪ್ರತಿನಿದಿಗಳು ಈ ಶಾಲೆಗೆ ದೈಹಿಕ ಶಿಕ್ಷಕರನ್ನು ನೇಮಿಸುವಂತೆ ಜನ ಪ್ರತಿನಿಧಿಗಳನ್ನು ಒತ್ತಾಯಿಸುವುದಾಗಿ ತಿಳಿಸಿದರು.
ಕೆಂಪೇಗೌಡ ಒಕ್ಕಲಿಗರ ವೇದಿಕೆಯ ಕಸಬಾ ಅಧ್ಯಕ್ಷ ದಯಾನಂದ್ ಮಾತನಾಡಿ. ಆಟದೊಂದಿಗೆ ಪಾಠಕ್ಕೂ ಪ್ರಥಮ ಆಧ್ಯತೆಯನ್ನು ನೀಡಿ ನೂರಕ್ಕೆ ನೂರು ಅಂಕ ಪಡೆಯುವಂತೆ ತಿಳಿಸಿದರು.
ತಾಲ್ಲೂಕು ಉಪಾಧ್ಯಕ್ಷ ಅಶ್ವತ್ ಬೆಟ್ಟಗೆರೆ ಮಾತನಾಡಿ. ೪೮ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಈ ಸರ್ಕಾರಿ ಶಾಲೆಗೆ ದೈಹಿಕ ಶಿಕ್ಷಕರ ಕೊರತೆಯನ್ನು ನೀಗಿಸುವಂತೆ ಜನಪ್ರತಿನಿದಿಗಳನ್ನು ಒತ್ತಾಯಿಸುವುದಾಗಿ ತಿಳಿಸಿದರು.
ಅಧ್ಯಕ್ಷತೆಯನ್ನು ಮುಖ್ಯ ಶಿಕ್ಷಕ ಎ.ಎಂ.ಬಸವಕುಮಾರ್ ಮಾತನಾಡಿ ಕೆಂಪೇಗೌಡ ಒಕ್ಕಲಿಗರ ವೇದಿಕೆಯ ಅಧ್ಯಕ್ಷರು ಸದಸ್ಯರುಗಳು ಹಾಗೂ ಪತ್ರಕರ್ತ ರಾಘವೇಂದ್ರ ಅವರ ಸಹಕಾರದಿಂದ ನಮ್ಮ ಶಾಲೆ ಕ್ರೀಡೆಯಲ್ಲಿ ಗುರುತಿಸುವಂತೆ ಮಾಡಿದೆ. ಬಡ ವಿದ್ಯಾರ್ಥಿಗಳ ಬಗ್ಗೆ ತಾವಾಗೇ ಮುಂದೆ ಬಂದು ಕಾಳಜಿವಹಿಸುವುದರೊಂದಿಗೆ ವಿದ್ಯೆಗೆ ಪ್ರಥಮ ಆಧ್ಯತೆ ನೀಡುತ್ತಿದ್ದು ತಾವು ಮತ್ತು ಶಿಕ್ಷಕ ವೃಂಧ ಋಣಿಯಾಗಿರುವುದಾಗಿ ತಿಳಿಸಿದರು.
ವಲಯ ಮಟ್ಟದಲ್ಲಿ ನಡೆದ ಬಾಲಕರ ವಿಭಾಗದಲ್ಲಿ ಕಬ್ಬಡಿ ಪ್ರಥಮ, ಅಥ್ಲೇಟಿಕ್ ನಲ್ಲಿ ಗುಂಡು ಎಸೆತ ಸಚ್ಚಿನ್ ಪ್ರಥಮ, ಹ್ಯಾಮರ್ ತ್ರೋ ಆಯುಶ್ ದ್ವಿತೀಯ, ತ್ರಿವಿಕ ಜಿಗಿತ ಕೌಶಿಕ್ ದ್ವಿತಿಯ, ೨೦೦ ಮೀಟರ್ ಓಟ ಸಚ್ಚಿನ್ ತೃತಿಯ, ೮೦೦ ಮೀಟರ್ ಓಟ ಅಕ್ಷಯ್ ತೃತಿಯ, ಹ್ಯಾಮರ್ ತ್ರೋ ಸಂಜಯ್ ತೃತಿಯಾ ಸ್ಥಾನ ಪಡೆದಿದ್ದಾರೆ.
ಬಾಲಕಿಯರ ವಿಭಾಗದಲ್ಲಿ ವಾಲಿಬಾಲ್ ದ್ವಿತಿಯ, ಅಥ್ಲೇಟಿಕ್ ವಿಭಾಗದಲ್ಲಿ ಹ್ಯಾಮರ್ ತ್ರೋ ರಕ್ಷಿತಾ ಪ್ರಥಮ, ಚಕ್ರ ಎಸೆತ ರಕ್ಷಿತಾ ಪ್ರಥಮ, ತ್ರಿವಿಕ ಜಿಗಿತ ಪೂರ್ವಿಕ ದ್ವಿತಿಯಾ, ಗುಂಡು ಎಸೆತದಲ್ಲಿ ನಿತ್ಯಶ್ರೀ ದ್ವಿತಿಯಾ, ತ್ರಿವಿಕ ಜಿಗಿತ ನಿತ್ಯಶ್ರೀ ತೃತಿಯಾ, ಎತ್ತರ ಜಿಗಿತ ಸಂಪ್ರಿತಾ ತೃತಿಯಾ, ೨೦೦ ಮೀಟರ್ ಓಟ ದಲ್ಲಿ ಮಾಲಿನಿ ತೃತಿಯ ಸ್ಥಾನ ಪಡೆದಿದ್ದಾರೆ ಎಂದು ಶಿಕ್ಷಕ ಆನಂದ್ ತಿಳಿಸಿದ್ದಾರೆ. ವೇದಿಕೆಯಲ್ಲಿ ಶಿಕ್ಷಕಿ ಲಾವಣ್ಯ, ಕಬ್ಬಡಿ ತರಬೇತಿದಾರ ವಿಶ್ವನಾಥ್ ಉಪಸ್ಥಿತರಿದ್ದರು.










