ವ್ಯಕ್ತಿಯನ್ನು ನಗ್ನಗೊಳಿಸಿ ಹಲ್ಲೆ ಮಾಡಿದ್ದ ಆರೋಪಿಗೆ ಪೋಲಿಸರಿಂದ ಗುಂಡೇಟು.

34

ಬೆಂಗಳೂರು: ವ್ಯಕ್ತಿಯೋರ್ವನನ್ನು ನಗ್ನಗೊಳಿಸಿ ಹಲ್ಲೆ ತುಮಕೂರಿನಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿ ಪವನ್ ಅಲಿಯಾಸ್ ಕಡುಬು ಕಾಲಿಗೆ ಗೋವಿಂದರಾಜನಗರ ಇನ್ಸ್‍ಪೆಕ್ಟರ್ ಸುಬ್ರಮಣ್ಯ ಅವರು ಗುಂಡು ಹಾರಿಸಿದ್ದಾರೆ. ಆರೋಪಿ ವಿರುದ್ದ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲಿ ದೂರು ದಾಖಲಾಗಿದೆ.
ರಾಜಗೋಪಾಲ ನಗರದ ರೌಡಿಶೀಟರ್ ಪವನ್ ಅಲಿಯಾಸ್ ಕಡುಬು ಮೂಲತಃ ತುಮಕೂರಿನವನು. ಈತ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಈತನ ವಿರುದ್ದ ರಾಜಗೋಪಾಲನಗರ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದ ವಿಶ್ವಾಸ್ ಎಂಬಾತನ ಮೇಲೆ ಸೋಮವಾರ ಆರೋಪಿ ಪವನ್ ಹಲ್ಲೆ ಮಾಡಿದ್ದಾನೆ.
ತನ್ನ ಮೇಲೆ ನಡೆದ ಹಲ್ಲೆಯ ಬಗ್ಗೆ ವಿಶ್ವಾಸ್ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ಸಂಬಂಧ ಆರೋಪಿಯ ಮಾಹಿತಿ ಪಡೆಯಲು ಮುಂದಾದ ಪೋಲೀಸರಿಗೆ ಕಳೆದ 12 ದಿನಗಳ ಹಿಂದೆ ನಡೆದಿರುವ ಮತ್ತೊಂದು ಹಲ್ಲೆಯ ಸಂಗತಿ ದೃಶ್ಯ ಸಮೇತ ಲಭ್ಯವಾಗಿದೆ. ಓರ್ವನ ಬಟ್ಟೆ ಬಿಚ್ಚಿಸಿ ನಗ್ನಗೊಳಿಸಿ ಹಲ್ಲೆ ಮಾಡಿದ್ದಲ್ಲದೆ, ಅದನ್ನು ವಿಡಿಯೋ ರೆಕಾರ್ಡ್ ಮಾಡಿರುವುದು ತಿಳಿದಿದೆ.
ಆರೋಪಿ ಪವನ್ ಉಳ್ಳಾಲ ಬಳಿ ಅಡಗಿಕೊಂಡಿದ್ದನು. ಹಣ ಇಲ್ಲದೆ ರಾಬರಿ ಮಾಡಲು ಮುಂದಾಗಿದ್ದನು. ಕತ್ತಲಲ್ಲಿ ಬಂಧವರ ಹಣ ಕಿತ್ತುಕೊಳ್ಳುವ ಸ್ಕಚ್ ಹಾಕಿ ಅಡಗಿಕೊಂಡಿದ್ದನು. ಇದಕ್ಕಾಗಿ ನಸುಕಿನ ಜಾವ 3:30 ರ ಸುಮಾರಿಗೆ ಮೊಬೈಲ್ ಆನ್ ಮಾಡಿದ್ದಾನೆ ಆರೋಪಿ ಪವನ್ ಮೊಬೈಲ್ ಆನ್ ಆಗುತ್ತಿದ್ದಂತೆ ನೆಟ್ವರ್ಕ್ ಆಧರಿಸಿ ಗೊವಿಂದರಾಜನಗರ ಇನ್ಸ್‍ಪೆಕ್ಟರ್ ಸುಬ್ರಮಣ್ಯ ಮತ್ತು ಸಿಬ್ಬಂದಿ ಆರೋಪಿ ಪವನ್‍ನನ್ನು ಬಂಧಿಸಲು ಹೋದ ಸಮಯದಲ್ಲಿ ಆರೋಪಿ ಪವನ್ ಕಾನ್ಸ್‍ಟೇಬಲ್ ವೆಂಕಟೇಶ್ ಅವರ ಮೇಲೆ ಹಲ್ಲೆ ಮಾಡಿ, ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಹಿಡಿಯಲು ಹೋದ ಇನ್ಸ್‍ಪೆಕ್ಟರ್ ಸುಬ್ರಮಣ್ಯ ಅವರ ಮೇಲೂ ಹಲ್ಲೆ ಮಾಡಲು ಮುಂದಾದನು. ಆಗ, ಇನ್ಸ್‍ಪೆಕ್ಟರ್ ಸುಬ್ರಮಣ್ಯ ಅವರು ಆತ್ಮರಕ್ಷಣೆಗೆ ಮಾಡಿಕೊಳ್ಳಲು ಆರೋಪಿ ಪವನ್ ಕಾಲಿಗೆ ಗುಂಡು ಹಾರಿಸಿದ್ದಾರೆ.