ಕೆಎಸ್‌ಆರ್‌ಟಿಸಿ ಬಸ್​​ನಲ್ಲಿ ಕಿರುಕುಳ – ಯುವಕನಿಗೆ ಥಳಿಸಿದ ಯುವತಿ…

53
firstsuddi

ಮಂಡ್ಯ: ಕೆಎಸ್‌ಆರ್‌ಟಿಸಿ ಬಸ್​​ನಲ್ಲಿ ಪ್ರಯಾಣಿಸುತ್ತಿರುವಾಗ ಕಿರುಕುಳ ನೀಡಿದ ಯುವಕನಿಗೆ ಯುವತಿಯೋರ್ವಳು ಥಳಿಸಿರುವ ಘಟನೆ ಜಿಲ್ಲೆಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ.

ಮಂಡ್ಯದಿಂದ ಪಾಂಡವಪುರಕ್ಕೆ ತೆರಳುವ ಬಸ್​​ನಲ್ಲಿ ಯುವತಿ ಒಬ್ಬಳೆ ಕುಳಿತಿದ್ದಳು. ಇದನ್ನು ಗಮನಿಸಿದ ಯುವಕ ಹಿಂದಿನ ಸೀಟಿನಿಂದ ಕೀಟಲೆ ಕೊಡಲು ಶುರು ಮಾಡಿದ್ದನು. ಇದರಿಂದ ಕೋಪಗೊಂಡ ಯುವತಿ ಕುಚೇಷ್ಟೆ ಮಾಡುತ್ತಿದ್ದ ಯುವಕನಿಗೆ ಕಪಾಳಮೋಕ್ಷ ಮಾಡಿದ್ದಾಳೆ.

ನಂತರ ಯುವಕನ ಟೀ ಶರ್ಟ್ ಹಿಡಿದು ಹಿಗ್ಗಾ ಮುಗ್ಗ ಕೆನ್ನೆಗೆ ಬಾರಿಸಿದ್ದಾಳೆ. ಇನ್ನು ಯುವತಿ ಯುವಕನಿಗೆ ಥಳಿಸಿರುವ ದೃಶ್ಯಗಳು ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಯುವತಿ ಕೈಯಲ್ಲಿ ಏಟು ತಿಂದ ಯುವಕ ಬಸ್​​​ನಿಂದ ಇಳಿದು ಪರಾರಿಯಾಗಿದ್ದಾನೆ.