ಕೊಟ್ಟಿಗೆಹಾರ : ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಕನ್ನಡ ಕೈ ಬರಹ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ.
12 ವರ್ಷದೊಳಗಿನ ವಿಭಾಗ :ಶರಧಿ ಡಿ, ಶಿವಮೊಗ್ಗ (ಪ್ರಥಮ), ಹಿಮಾನಿ ಎಸ್, ಬೆಂಗಳೂರು (ದ್ವಿತೀಯ), ಲಕ್ಷ್ಮಿ ಎಸ್ ಮಳಲಿ, ಹಾವೇರಿ (ತೃತೀಯ), ವರ್ಷ ಕೆ ಮೂಡಿಗೆರೆ ಮತ್ತು ಸೃಷ್ಟಿ ಎಂ.ಆರ್ ಕೊಪ್ಪ (ಸಮಾಧಾನಕರ) ಬಹುಮಾನ ಪಡೆದುಕೊಂಡಿದ್ದಾರೆ.
13 ರಿಂದ 18 ವರ್ಷದೊಳಗಿನ ವಿಭಾಗ: ಕುಮಾರೇಶ್ ಎನ್, ಬಾಗಲಕೋಟೆ (ಪ್ರಥಮ), ವಂದನ ಕೆ, ಬೆಂಗಳೂರು (ದ್ವಿತೀಯ), ಚೇತನ ಪಿ.ಎಂ, ಚಿಂತಾಮಣಿ ನಗರ (ತೃತೀಯ), ಶ್ರೇಯಾ ಎಂ.ವಿ ಶಿರಸಿ ಮತ್ತು ಪ್ರಮೀಳಾ, ಉಡುಪಿ (ಸಮಾಧಾನಕರ) ಬಹುಮಾನ ಪಡೆದುಕೊಂಡಿದ್ದಾರೆ.
19 ವರ್ಷ ಮೇಲ್ಪಟ್ಟವರ ವಿಭಾಗ: ಶಿವಪ್ರಸಾದ್, ಬೆಳಗಾವಿ (ಪ್ರಥಮ), ವಿಸ್ಮಿತ ವಿ, ಶಿಕಾರಿಪುರ (ದ್ವಿತೀಯ), ಸಂಗೀತಾ ಬಿ.ಕೆ, ಮಂಡ್ಯ (ತೃತೀಯ), ಮಂಜುನಾಥ್ ವೈ.ಎಸ್. ಬೆಳ್ತಂಗಡಿ ಮತ್ತು ಡಾ.ಶ್ರೀಕಂಠ ಕೂಡಿಗೆ, ಶಿವಮೊಗ್ಗ (ಸಮಾಧಾನಕರ) ಬಹುಮಾನ ಪಡೆದುಕೊಂಡಿದ್ದಾರೆ.
ಕನ್ನಡ ಕೈಬರಹ ಸ್ಪರ್ದೆಗೆ ಒಟ್ಟು 814 ಪತ್ರಗಳು ಬಂದಿದ್ದು ಲೇಖಕರಾದ ನರೇಂದ್ರ ರೈ ದೇರ್ಲ, ಲೇಖಕರು ಹಾಗೂ ಉಪನ್ಯಾಸಕರಾದ ಡಾ. ಮಂಜುಳಾ ಹುಲ್ಲಹಳ್ಳಿ, ಚಿತ್ರ ಕಲಾವಿದರಾದ ಮೋನಪ್ಪ ಅವರು ತೀರ್ಪುಗಾರರಾಗಿದ್ದರು.
ವಿಜೇತರಿಗೆ ಮೂರು ವಿಭಾಗಗಳಲ್ಲಿ ಪ್ರಥಮ 3 ಸಾವಿರ, ದ್ವಿತೀಯ 2 ಸಾವಿರ ಮತ್ತು ತೃತೀಯ 1 ಸಾವಿರ ನಗದು ಬಹುಮಾನವಿದ್ದು ಜನವರಿಯಲ್ಲಿ ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ ಎಂದು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿಗಳು ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಸಿ.ರಮೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.