ಚಿಕ್ಕಮಗಳೂರು : ಕೇಂದ್ರ ಮತ್ತು ರಾಜ್ಯಸರ್ಕಾರಗಳು ಕೃಷಿಕರಿಗೆ ನೀಡುವ ಸಾಲ-ಸವಲತ್ತುಗಳನ್ನು ಪ.ಜಾತಿ ಪ.ವರ್ಗದ ಮೀನುಗಾರರಿಗೂ ಒದಗಿಸಬೇಕು ಎಂದು ದಸಂಸ ರಾಜ್ಯ ಸಮಿತಿ ಸದಸ್ಯ ಕೆ.ಸಿ.ವಸಂತಕುಮಾರ್ ಒತ್ತಾಯಿಸಿದರು.ನಗರದ ಲಕ್ಷಿö್ ಸಮುದಾಯ ಭವನದಲ್ಲಿ ಇಂದು ನಡೆದ ತಾಲ್ಲೂಕು ಶ್ರೀಗಂಗಾ ಪ.ಜಾತಿ, ಪ.ವರ್ಗದ ಮೀನುಗಾರರ ವಿವಿಧೋದ್ದೇಶ ಸಹಕಾರ ಸಂಘದ ಸರ್ವಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೊರೊನಾ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಲ್ಲಾ ಜಾತಿಗಳಿಗೆ ಮತ್ತು ಎಲ್ಲಾ ಕ್ಷೇತ್ರದ ಜನರಿಗೆ ಆರ್ಥಿಕ ಪ್ಯಾಕೇಜ್ ಮತ್ತು ಪಡಿತರ ಕಿಟ್‌ಗಳನ್ನು ನೀಡಿದವು. ಆದರೆ, ಪಂ.ಜಾತಿ ಪವರ್ಗದ ಮೀನುಗಾರರ ಸಹಾಯಕ್ಕೆ ಬರಲಿಲ್ಲ ಎಂದು ಆರೋಪಿಸಿದರು. ಕೊರೊನಾ ವೇಳೆ ಆರ್ಥಿಕವಾಗಿ ಸಂಕಷ್ಟಕ್ಕೀಡಾದ ಅನೇಕ ಸಂಘಗಳ ಸಾಲಮನ್ನಾ ಮಾಡಲಾಯಿತು. ಆದರೆ, ಪ.ಜಾತಿ, ಪ.ವರ್ಗದ ಮೀನುಗಾರರ ಸಂಘದ ಸಾಲವನ್ನು ಮನ್ನಾ ಮಾಡಲಿಲ್ಲ. ಕೆಳವರ್ಗದ ಮೀನುಗಾರರು ಮತ್ತು ಅವರಸಂಘಗಳನ್ನು ಸರ್ಕಾರ ಲೆಕ್ಕಕ್ಕೇ ಇಟ್ಟಿಲ್ಲ ಎಂದುದೂರಿದರು.
ಮೀನುಗಾರಿಕೆ ಇಲಾಖೆ ಸಹ ಪ.ಜಾತಿ, ಪ.ವರ್ಗದ ಮೀನುಗಾರರತ್ತ ಮತ್ತು ಅವರ ಸಂಘದತ್ತತಿರುಗಿ ನೋಡಲಿಲ್ಲ, ಎಂದು ಆರೋಪಿಸಿದ ಅವರು, ಮೀನುಗಾರಿಕೆಯನ್ನು ಕೃಷಿ ಎಂದು ಪರಿಗಣಿಸಿರುವಹಿನ್ನೆಲೆಯಲ್ಲಿ ಕೇಳವರ್ಗದ ಮೀನುಗಾರರಿಗೂ ಇಲಾಖೆ ಮತ್ತು ಸರ್ಕಾರಗಳು ಸಾಲ ಮತ್ತು ಸವಲತ್ತುಗಳನ್ನು ನೀಡಬೇಕು ಎಂದುಆಗ್ರಹಿಸಿದರು. ಮೀನುಗಾರಿಕೆ ಇಲಾಖೆ ಮೇಲ್ವಿಚಾರಕ ಎ.ಆರ್.ಶಾಂತೇಗೌಡ ಮಾತನಾಡಿ, ಇಲಾಖೆಯಲ್ಲಿ ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ಪ.ಜಾತಿ,ಪ.ವರ್ಗದ ಮೀನುಗಾರರಿಗೆ ಮತ್ತು ಅವರ ಸಂಘಗಳಿಗೆ ಇರುವ ಯೋಜನೆಗಳುಮತ್ತು ಸವಲತ್ತುಗಳನ್ನುವಿವರಿಸಿದರು.
ಮೀನುಗಾರಿಕೆ ಇಲಾಖೆಯಲ್ಲಿರುವ ಸವಲತ್ತುಗಳನ್ನು ಪಡೆದುಕೊಳ್ಳಲು ಅರ್ಜಿ ನೀಡಿದವರಿಗೆ ಅವುಗಳನ್ನುಒದಗಿಸಲು ಸರ್ವ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ವಿ.ಧರ್ಮೇಶ್ ಪ.ಜಾತಿ, ಪ.ವರ್ಗದ ಮೀನುಗಾರರು ಮತ್ತುಸಂಘದ ಸಮಸ್ಯೆಗಳಿಗೆ ಮೀನುಗಾರಿಕೆ ಇಲಾಖೆ ಹಾಗೂ ಸಣ್ಣ ನೀರಾವರಿ ಇಲಾಖೆ ಸ್ಪಂಧಿಸುತ್ತಿಲ್ಲ,ಯಾವುದೇಸವಲತ್ತುಗಳನ್ನು ನೀಡುತ್ತಿಲ್ಲ ಎಂದು ಆರೋಪಿಸಿದರು. ಸಾಲ ಸೇರಿದಂತೆಸವಲತ್ತುಗಳನ್ನು ನೀಡುವಲ್ಲಿ ಮೇಲ್ವರ್ಗದ ಮೀನುಗಾರರು ಮತ್ತು ಕೆಳಜಾತಿಯಮೀನುಗಾರರ ನಡುವೆ ಮಾಡುತ್ತಿರುವ ತಾರತಮ್ಯವನ್ನು ಇಲಾಖೆ ಕೈಬಿಡಬೇಕು ಪ.ಜಾತಿ. ಪ.ವರ್ಗದ ಮೀನುಗಾರರಿಗೆಮೀನು ಮಾರಾಟ ಮಾಡಲು ಮಾರುಕಟ್ಟೆ ವ್ಯವಸ್ಥೆಕಲ್ಪಿಸಬೇಕು ಎಂದು ಒತ್ತಾಯಿಸಿದರು.ಸಂಘದ ನಿರ್ದೇಶಕರಾದ ಗಣೇಶ್, ಚಂದ್ರಪ್ಪ,ರಾಮಚಂದ್ರ ಸುರೇಶ್,ಜಯರಾಮ್, ಕಾರ್ಯದರ್ಶಿ ನಟರಾಜ್, ಕಾವ್ಯ ಉಪಸ್ಥಿತರಿದ್ದರು.










