ಕೊಟ್ಟಿಗೆಹಾರ:ನಂದಿನಿ ಹಾಲಿನ ಉತ್ಪನ್ನಗಳು ಗ್ರಾಮೀಣ ಪ್ರದೇಶಕ್ಕೆ ಕಡಿಮೆ ದರದಲ್ಲಿ ದೊರಕುವಂತಾಗಬೇಕು ಎಂದು ಗ್ರಾಮೀಣ ಪ್ರದೇಶಗಳಲ್ಲಿ ನಂದಿನ ಹಾಲಿನ ಮಾರಾಟ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಹಾಸನ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಾದ ಗೋಪಾಲಯ್ಯ ಹೇಳಿದರು.
ಕೊಟ್ಟಿಗೆಹಾರದ ಎಚ್‍ಪಿ ಪೆಟ್ರೋಲ್ ಬಂಕ್ ಆವರಣದಲ್ಲಿ ನೂತನ ನಂದಿನಿ ಹಾಲಿನ ಉತ್ಪನ್ನಗಳ ಮಾರಾಟ ಮಳಿಗೆಯನ್ನು ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ನಂದಿನಿ ಹಾಲಿನ 60 ಕ್ಕೂ ಹೆಚ್ಚು ಉತ್ಪನ್ನಗಳಿದ್ದು ಗುಣಮಟ್ಟ ಮತ್ತು ರುಚಿಕರವಾದ ಉತ್ಪನ್ನಗಳನ್ನು ಎಂಆರ್‍ಪಿ ದರದಲ್ಲಿ ಗ್ರಾಹಕರಿಗೆ ನೀಡಲು ಉದ್ದೇಶಿಸಲಾಗಿದ್ದು ಗ್ರಾಮೀಣ ಭಾಗದ ಜನರಿಗೆ ಇದರಿಂದ ಅನುಕೂಲವಾಗಲಿದೆ ಎಂದರು.
ನಂದಿನಿ ಹಾಲಿನ ಉತ್ಪನ್ನ ಮಳಿಗೆ ಉದ್ಘಾಟನೆ ಮಾಡಿ ಮಾತನಾಡಿದ ಎಚ್.ಪಿ.ಸಿಎಲ್‍ನ ಹಿರಿಯ ಪ್ರಾದೇಶಿಕ ವ್ಯವಸ್ಥಾಪಕ ವಸಂತ್ ರಾವ್ ಮಾತನಾಡಿ ಗ್ರಾಮೀಣ ಜನರಿಗೆ ಉತ್ತಮ ಗುಣಮಟ್ಟದ ಹಾಲಿನ ಉತ್ಪನ್ನಗಳನ್ನು ನೀಡಲು ಹಾಸನ ಹಾಲು ಒಕ್ಕೂಟದ ಜೊತೆ ಕೈಜೋಡಿಸಿ ನಂದಿನಿ ಮಳಿಗೆಯನ್ನು ಎಚ್‍ಪಿ ಪೆಟ್ರೋಲ್ ಬಂಕ್ ಆವರಣದಲ್ಲಿ ಆರಂಂಬಿಸಿದ್ದು ಗ್ರಾಮೀಣ ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.
ಕಡಿಮೆ ದರದ ಮಾರಾಟ ಮಳಿಗೆಯಲ್ಲಿ ನಂದಿನಿ ಹಾಲಿನ ಉತ್ಪನ್ನಗಳನ್ನು ಗ್ರಾಮಸ್ಥರು ಮತ್ತು ಪ್ರವಾಸಿಗರು ಮುಗಿಬಿದ್ದು ಖರೀದಿಸಿದರು.
ಈ ಸಂದರ್ಭದಲ್ಲಿ ಹಾಸನ ಹಾಲು ಒಕ್ಕೂಟದ ಗೋವಿಂದರಾಜ್, ಕೃಷ್ಣಮೂರ್ತಿ, ಪ್ರಿಯಾರಂಜನ್, ದುರ್ಗಾಂಭ ಪೆಟ್ರೋಲ್ ಬಂಕ್ ಮಾಲೀಕರಾದ ರಾಘವೇಂದ್ರ, ವ್ಯವಸ್ಥಾಪಕರಾದ ಶರತ್, ಸಿಬ್ಬಂದಿಗಳಾದ ಪ್ರಕಾಶ್, ಪ್ರಶಾಂತ್, ಗ್ರಾಮಸ್ಥರಾದ ಅಭಿಲಾಷ್, ಕೃಷ್ಣಮೂರ್ತಿ, ಪ್ರಶಾಂತ್, ಅಶೋಕ್, ಮೊದಲಾದವರು ಹಾಜರಿದ್ದರು.
Home ಸ್ಥಳಿಯ ಸುದ್ದಿ ಕೊಟ್ಟಿಗೆಹಾರ: ನಂದಿನಿ ಹಾಲಿನ ಉತ್ಪನ್ನಗಳು ಗ್ರಾಮೀಣ ಪ್ರದೇಶಕ್ಕೆ ಕಡಿಮೆ ದರದಲ್ಲಿ ದೊರಕುವಂತಾಗಬೇಕು- ಗೋಪಾಲಯ್ಯ.










