ನಿರ್ದೇಶಕನ ವಿರುದ್ಧ ನಟಿ ಅಮಲಾ ಪೌಲ್​ನಿಂದ ಮೀ ಟೂ ಆರೋಪ…

352
firstsuddi

ಬೆಂಗಳೂರು: ಸುದೀಪ್ ಜೊತೆ ಹೆಬ್ಬುಲಿ ಸಿನಿಮಾದಲ್ಲಿ ನಟಿಸಿದ್ದ ನಾಯಕಿ ಅಮಲಾ ಪೌಲ್ ಅವರು ತಮಿಳುನಾಡಿನ ನಿರ್ದೇಶಕ ಸುಶಿ ಗಣೇಶನ್ ವಿರುದ್ಧ ಮೀ ಟೂ ಆರೋಪ ಮಾಡಿದ್ದಾರೆ. ನಾನು ನಾಯಕಿಯಾಗಿ ಅಭಿನಯಿಸಿರುವ ತಿರುಟ್ಟು ಪಾಯಲೆ – 2 ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ನಿರ್ದೇಶಕ ಸುಶಿ ಗಣೇಶನ್ ಅವರು ಅಸಭ್ಯವಾಗಿ ವರ್ತಿಸುತ್ತಿದ್ದರು ಎಂದು ಅಮಲಾ ಪೌಲ್ ಆರೋಪಿಸಿದ್ದಾರೆ. ಈ ಮೊದಲು ನಿರ್ದೇಶಕಿ ಲೀನಾ ಮಣಿಮೆಕಲೈ ಸುಶಿ ಗಣೇಶನ್ ಮೇಲೆ ಆರೋಪ ಮಾಡಿದ್ದರು ಅವರ ಬೆಂಬಲಕ್ಕೆ ನಿಂತಿರುವ ಅಮಲಾ ಪೌಲ್ ಆತ ನನ್ನ ಬಳಿಯೂ ಅಸಭ್ಯವಾಗಿ ನಡೆದುಕೊಂಡಿದ್ದ. ನಾನು ಸಂಪೂರ್ಣವಾಗಿ ಲೀನಾ ಮಣಿಮೆಕಲೈ ಅವರಿಗೆ ಬೆಂಬಲ ಸೂಚಿಸುತ್ತೇನೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.

firstsuddi