ಕೊಟ್ಟಿಗೆಹಾರ: ಕಂದಾಯ ಇಲಾಖೆ, ಭೂಮಾಫನ ಇಲಾಖೆ ಮತ್ತು ಅರಣ್ಯ ಇಲಾಖೆಗಳ ಅಧಿಕಾರಿಗಳು ಕೊಟ್ಟಿಗೆಹಾರ ಸುತ್ತಮುತ್ತ ಜಂಟಿ ಸರ್ವೇ ಕಾರ್ಯ ಆರಂಭಿಸಿದರು.ಈ ಹಿಂದೆ ಗೋಮಾಳದ ಜಾಗವನ್ನು ಅರಣ್ಯ ಇಲಾಖೆಗೆ ವರ್ಗಾಯಿಸಲಾಗಿತ್ತು. ಆ ಗೋಮಾಳದ ಜಾಗದಲ್ಲಿ ಹಿಂದೆ ಕೃಷಿ ಮಾಡಿದ ಭೂಮಿ ಅರಣ್ಯ ವ್ಯಾಪ್ತಿಗೆ ಬಂದು ರೈತರಿಗೆ ತುಂಬಾ ತೊಂದರೆಯಾಗಿತ್ತು. ಇದನ್ನು ಮನಗಂಡ ಸರ್ಕಾರ ಅರಣ್ಯಭೂಮಿ ಹಾಗೂ ದಟ್ಟಾರಣ್ಯ ಹಾಗೂ ಗೋಮಾಳವನ್ನು ಸರ್ವೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಸೂಚಿಸಲಾಗಿದೆ. ಇದರಿಂದಾಗಿ ತಾಲ್ಲೂಕಿನಾದ್ಯಂತ ಜಂಟಿ ಸರ್ವೆ ನಡೆಸಲಾಗುತ್ತಿದ್ದು ಮೂರು ಇಲಾಖೆಗಳ ಅಧಿಕಾರಿಗಳು ಮಂಗಳವಾರ ಕೊಟ್ಟಿಗೆಹಾರ ಸುತ್ತಮುತ್ತ ಸರ್ವೇ ನಡೆಸಿದರು.
ಪತ್ರಿಕೆಯೊಂದಿಗೆ ಮಾತನಾಡಿದ ಉಪವಲಯ ಅರಣ್ಯಾಧಿಕಾರಿ ಶಿವರಾಜ್, ಮೇಲಾಧಿಕಾರಿಗಳ ಸೂಚನೆಯಂತೆ ದಟ್ಟಾರಣ್ಯ ಹಾಗೂ ಕಂದಾಯ ಭೂಮಿ ಸರ್ವೇ ಕಾರ್ಯವನ್ನು ತರುವೆ, ಬಿನ್ನಡಿ, ಕೊಡೆಬೈಲ್, ಕೊಟ್ಟಿಗೆಹಾರದಲ್ಲಿ ನಡೆಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಸ್ವನಿರೀಕ್ಷಕ ಮಂಜುನಾಥ್, ಸರ್ವೇ ಅಧಿಕಾರಿ ಶಂಕರ್, ಅರಣ್ಯ ರಕ್ಷಕರಾದ ಚೇತನ್, ಪೂರ್ಣೇಶ್, ವಿಜಯಕುಮಾರ್ ಇದ್ದರು.










