ತರೀಕೆರೆ : ಅರಣ್ಯದಲ್ಲೇ ವಾಸ್ತವ್ಯ ಮಾಡಿ ಶ್ರೀಗಂಧ ಕಳ್ಳತನ ಮಾಡುತ್ತಿದ್ದ ಕಳ್ಳರ ಬಂಧನ…

380
firstsuddi

ಚಿಕ್ಕಮಗಳೂರು : ಶ್ರೀಗಂಧ ಕಳ್ಳತನ ಮಾಡುತ್ತಿದ್ದ ಕಳ್ಳರನ್ನು ಬಂಧಿಸಿರುವ ಘಟನೆ ಜಿಲ್ಲೆಯ ತರೀಕೆರೆ ತಾಲ್ಲೂಕಿನ ಮೊಂಡ್ರೆ ಗ್ರಾಮದ ಅರಣ್ಯದಲ್ಲಿ ನಡೆದಿದೆ. ವೆಂಕಟೇಶ್ ಹಾಗೂ ರವಿ ಬಂಧಿತ ಆರೋಪಿಗಳು. ಇವರು ಅರಣ್ಯದಲ್ಲೇ ವಾಸ್ತವ್ಯ ಮಾಡಿ ಶ್ರೀಗಂಧವನ್ನು ಕಳ್ಳತನ ಮಾಡುತ್ತಿದ್ದರು ಎನ್ನಲಾಗಿದ್ದು, ತರೀಕೆರೆ ವಲಯ ಅರಣ್ಯಾಧಿಕಾರಿಗಳು ಬಂಧಿತರಿಂದ 22 ಕೆ.ಜಿ ಶ್ರೀಗಂಧವನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.