ಕೊರೊನಾ ಎಫೆಕ್ಟ್ – ರಾಮನಗರದಲ್ಲಿ 17 ಸಾವಿರ ಕೋಳಿಗಳ ಜೀವಂತ ಸಮಾಧಿ…

184
firstsuddi

ರಾಮನಗರ : ಮಹಾಮಾರಿ ಕೊರೊನಾ ವೈರಸ್ ಭೀತಿ ಕೋಳಿ ಉದ್ಯಮದ ಮೇಲೆ ಹೆಚ್ಚಾಗಿ ಪರಿಣಾಮ ಬೀರಿದ್ದು, ಹೀಗಾಗಿ 17 ಸಾವಿರ ಕೋಳಿಗಳನ್ನು ಜೀವಂತವಾಗಿ ಸಮಾಧಿ ಮಾಡಿರುವ ಘಟನೆ ಜಿಲ್ಲೆಯ ಚನ್ನಪಟ್ಟಣದಲ್ಲಿ ನಡೆದಿದೆ. ಚನ್ನಪಟ್ಟಣದ ರಿಯಾಜ್ ಅಹಮದ್ ಹಾಗೂ ಫಯಾಜ್ ಅಹಮದ್ ಎಂಬುವವರು ಸುಮಾರು 75 ಸಾವಿರ ಕೋಳಿಗಳನ್ನು ಸಾಕುತ್ತಿದ್ದರು. ಆದರೆ ವಿಶ್ವದಾಧ್ಯಂತ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ವೈರಸ್ ಕೋಳಿಯಿಂದ ಹರಡುತ್ತದೆ ಎಂಬ ವದಂತಿಯಿಂದ ಕೋಳಿಗಳ ಬೆಲೆಯಲ್ಲಿ ತೀವ್ರ ಇಳಿಕೆ ಕಂಡಿದ್ದು, ಕೆಜಿಗೆ 10ರಿಂದ 15 ರೂ ವರೆಗೆ ಇಳಿಕೆ ಕಂಡಿದೆ. ಹೀಗಾಗಿ ಮಾಲೀಕರು ಸಾರ್ವಜನಿಕರಿಗೆ ಕೋಳಿಗಳನ್ನು ಉಚಿತವಾಗಿ ಕೊಡಲು ಮುಂದಾದರೂ ಕೂಡಾ ಸಾರ್ವಜನಿಕರು ಖರೀದಿಸದೇ ಇರುವುದರಿಂದ ತಮ್ಮ ಕೋಳಿ ಫಾರಂ ಬಳಿಯೇ ಜೆಸಿಬಿ ಮೂಲಕ ಗುಂಡಿಯನ್ನು ತೋಡಿಸಿ 75 ಸಾವಿರ ಕೋಳಿಗಳ ಪೈಕಿ 17 ಸಾವಿರ ಕೋಳಿಗಳನ್ನು ಗುಂಡಿಯಲ್ಲಿ ಮುಚ್ಚಿ ಜೀವಂತ ಸಮಾಧಿ ಮಾಡಿದ್ದಾರೆ.