ಕೊರೊನಾ ನೆಗಟಿವ್ ಬಂದರೂ ಒಂದು ವಾರ ಕ್ವಾರಂಟೈನ್ : ಡಾ.ಕೆ.ಸುಧಾಕರ್.

68
firstsuddi

ಬೆಂಗಳೂರು : ವಿದೇಶದಿಂದ ರಾಜ್ಯಕ್ಕೆ ಬರುವ ಪ್ರಯಾಣಿಕರಿಗೆ ಕೊರೊನಾ ನೆಗಟಿವ್ ಬಂದರೂ ಒಂದು ವಾರ ಕ್ವಾರಂಟೈನ್ ನಲ್ಲಿರಿಸಲಾಗುತ್ತದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.

ದಕ್ಷಿಣ ಆಫ್ರಿಕಾ ಸೇರಿದಂತೆ ಕೆಲ ರಾಷ್ಟ್ರಗಳಲ್ಲಿ ಹೊಸ ರೂಪಾಂತರಿ ತಳಿ ಪತ್ತೆಯಾಗಿದೆ. ಇದೀಗ ಕೊರೊನಾ ಹೊಸ ರೂಪಾಂತರಿ ತಳಿಗೆ ಒಮಿಕ್ರಾನ್ ಎಂದು ನಾಮಕರಣ ಮಾಡಿದ್ದಾರೆ. ಸಮುದಾಯಕ್ಕೆ ಬಂದರೆ ಈ ವೈರಸ್ ವೇಗವಾಗಿ ಹರಡುತ್ತದೆ ಎಂಬ ಮಾಹಿತಿ ಇದೆ. ಜಿನೋಮಿಕ್ ಸಿಕ್ವೆನ್ಸಿಂಗ್ ಮಾಡಿ, ಹರಡುವ ತೀವ್ರತೆ ಬಗ್ಗೆ ಪರೀಕ್ಷೆ ನಡೆಸಲಾಗುತ್ತಿದೆ. ಸದ್ಯಕ್ಕೆ ಆತಂಕ ಪಡುವ ಅಗತ್ಯವಿಲ್ಲ. ಈ ಹೊಸ ತಳಿಯು ಈ ಹಿಂದಿನ ರೋಗಲಕ್ಷಣಗಳನ್ನೇ ಹೊಂದಿದೆ. ಇದೊಂದು ವೇಗವಾಗಿ ಹರಡುವ ರೂಪಾಂತರ ತಳಿಯಾಗಿದ್ದು, ನಾಲ್ಕು ರಾಷ್ಟ್ರಗಳಲ್ಲಿ ಈ ವೈರಸ್ ಹರಡಿದೆ. ಹೀಗಾಗಿ ಅಲ್ಲಿಂದ ಬರುವ ಪ್ರಯಾಣಿಕ ಮೇಲೆ ತೀವ್ರ ನಿಗಾ ವಹಿಸಲಾಗುತ್ತಿದೆ ಎಂದಿದ್ದಾರೆ.

ನಿನ್ನೆ ಸಭೆ ನಡೆಸಿದ್ದೇವೆ. ಏರ್ ಪೋರ್ಟ್ಗಳಲ್ಲಿ ಕೂಡ ಟೆಸ್ಟ್ ಮಾಡಲಾಗುತ್ತಿದೆ. ಈಗಾಗಲೇ ಮಾರ್ಗ ಸೂಚಿ ಪ್ರಕಟ ಮಾಡಿದ್ದೇವೆ. ನೆಗಟಿವ್ ಬಂದ ಮೇಲೂ ಒಂದು ವಾರ ಕ್ವಾರಂಟೈನ್ ನಲ್ಲಿರಬೇಕೆಂದು ಸೂಚಿಸಿದ್ದೇವೆ.