ಮಧ್ಯಪ್ರದೇಶ : ಕೊರೊನಾ ಸಾಂಕ್ರಾಮಿಕ ರೋಗದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಜನರಲ್ಲಿ ಭಯ ಹುಟ್ಟಿಸಲು ಕಾರಣವಾದ ಹಿನ್ನಲೆಯಲ್ಲಿ ಹಿರಿಯ ಕಾಂಗ್ರೆಸ್ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ವಿರುದ್ಧ ರಾಜ್ಯ ಕ್ರೈಂ ಬ್ರ್ಯಾಂಚ್ ಎಫ್ ಐಆರ್ ದಾಖಲಿಸಿಕೊಂಡಿದೆ.
ಶನಿವಾರ ಉಜ್ಜಯಿನಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾಜಿ ಸಿಎಂ ಕಮಲ್ ನಾಥ್ ಅವರು ಜಗತ್ತಿನಲ್ಲಿ ಹರಡಿರುವ ಕೊರೊನಾ ವೈರಸ್ ಭಾರತೀಯ ರೂಪಾಂತರವೆಂದು ಕರೆಯಲಾಗುತ್ತದೆ. ನಮ್ಮ ವಿಜ್ಞಾನಿಗಳು ಇದನ್ನು ಭಾರತೀಯ ರೂಪಾಂತರ ಎಂದು ಕರೆಯುತ್ತಿದ್ದಾರೆ. ಆದರೆ, ಬಿಜೆಪಿ ಸಲಹೆಗಾರರು ಮಾತ್ರ ಈ ವಿಚಾರವನ್ನು ಒಪ್ಪಿಕೊಳ್ಳುತ್ತಿಲ್ಲ. ಎಂದು ಕಮಲ್ ನಾಥ್ ಹೇಳಿದ್ದರು. ಇದರ ವಿರುದ್ದ ಬಿಜೆಪಿ ನಾಯಕರು ಕಮಲ್ ನಾಥ್ ವಿರುದ್ದ ದೂರು ನೀಡಿದ್ದರು.
ಇದೀಗ ಕಮಲ್ ನಾಥ್ ವಿರುದ್ಧ ಐಪಿಸಿ ಸೆಕ್ಷನ್ 188 ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ 2005 ರ ಸೆಕ್ಷನ್ 54 ರ ಅಡಿಯಲ್ಲಿ ದೂರು ದಾಖಲಿಸಲಾಗಿದೆ.










