ಕೊರೊನಾಗೆ ಆರು ತಿಂಗಳ ಗರ್ಭಿಣಿ ಬಲಿ…

132
firstsuddi

ಮಂಡ್ಯ : ಕೊರೊನಾದಿಂದ ಆರು ತಿಂಗಳ ಗರ್ಭಿಣಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಮಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.

ಜಿಲ್ಲೆಯ ಮದ್ದೂರು ತಾಲ್ಲೂಕಿನ ರಂಜಿತಾ (24) ಮೃತಪಟ್ಟ ಗರ್ಭಿಣಿ. ರಂಜಿತಾ ಅವರಿಗೆ ಕಳೆದ ಹತ್ತು ದಿನಗಳ ಹಿಂದೆ ಕೊರೊನಾ ಸೋಂಕು ತಗುಲಿತ್ತು. ಈ ಹಿನ್ನಲೆ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಿಸದೇ ರಂಜಿತಾ ಅವರು ಸಾವನ್ನಪ್ಪಿದ್ದಾರೆ.

ಮಗುವಿನ ಬರುವಿಕೆಯ ನಿರೀಕ್ಷೆಯಲ್ಲಿದ್ದ ಕುಟುಂಬಕ್ಕೆ ಇದೀಗ ರಂಜಿತಾ ಅವರ ಸಾವಿನಿಂದಾಗಿ ಆಘಾತ ಉಂಟಾಗಿದೆ.