ದಲಿತ ಯುವಕನಿಗೆ ಮೂತ್ರ ಕುಡಿಸಿದ ಪಿಎಸ್ ಐ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು : ಸಿದ್ದರಾಮಯ್ಯ.

317
firstsuddi

ಬೆಂಗಳೂರು : ದಲಿತ ಯುವಕನಿಗೆ ಮೂತ್ರ ಕುಡಿಸಿದ ಪಿಎಸ್ ಐ ಅರ್ಜುನ್‌ ಹೊನಕೇರಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ವಿಪಕ್ಷ ನಾಯಕ ಸಿದ್ದರಾಮಯ್ಯನವರು ಆಗ್ರಹಿಸಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ಅವರು, ಕೂಡಲೇ ಅವನನ್ನು ಬಂಧಿಸಬೇಕು. ಅವನನ್ನು ಈಗ ಸಸ್ಪೆಂಡ್ ಮಾಡಿದ್ದಾರೆ. ರಕ್ಷಣೆ ಕೊಡಬೇಕಾದವರೆ ಈ ರೀತಿ ಮಾಡಿದರೆ ಹೇಗೆ? ಬಲವಂತವಾಗಿ ಮೂತ್ರ ಕುಡಿಸೋದು ಅಮಾನವೀಯ. ಅದು ಒಬ್ಬ ಪಿಎಸ್ ಐ ಮಾಡಿರೋದು ಸರಿಯಲ್ಲ. ಮೊದಲು ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇನ್ನೂ ಇಂತ ಘಟನೆ ಜಿಲ್ಲೆಯಲ್ಲೇ ನಡೆದರೂ ಸಿ. ಟಿ. ರವಿ ಸುಮ್ಮನಿದ್ದಾರೆಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ದಲಿತರ ವಿರೋಧಿಗಳು. ಅವರು ಯಾವತ್ತು ದಲಿತರ ಪರವಾಗಿದ್ದಾರೆ? ಎಂದು ಹೇಳಿದರು.