ಕೊಲೆಗೂ ಮನ್ನ ಹರ್ಷನಿಗೆ ಅಪರಿಚಿತ ಹುಡುಗಿಯರಿಂದ ವೀಡಿಯೋ ಕಾಲ್…

63
firstsuddi

ಶಿವಮೊಗ್ಗ : ಬಜರಂಗದಳದ ಕಾರ್ಯಕರ್ತ ಹರ್ಷನ ಹತ್ಯೆಗೂ ಮುನ್ನ ಇಬ್ಬರು ಅಪರಿಚಿತ ಹುಡುಗಿಯರಿಂದ ವಿಡಿಯೋ ಕಾಲ್ ಬಂದಿತ್ತು ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ.

ಹತ್ಯೆಗೂ ಮುನ್ನ ಇಬ್ಬರು ಅಪರಿಚಿತ ಹುಡುಗಿಯರು ಸಹಾಯಕ್ಕಾಗಿ ಹರ್ಷಗೆ ವೀಡಿಯೋ ಕಾಲ್ ಮಾಡಿದ್ದ ವಿಚಾರವನ್ನು ಹರ್ಷನ ಜೊತೆ ಇದ್ದ ಸ್ನೇಹಿತ ತಿಳಿಸಿದ್ದಾರೆ. ಹರ್ಷ ಕೊಲೆಯಾದ ದಿನ ರಾತ್ರಿ ಸಹಾಯ ಕೇಳುವ ನೆಪದಲ್ಲಿ ಇಬ್ಬರು ಹುಡುಗಿಯರು ಪದೇ ಪದೇ ವೀಡಿಯೋ ಕಾಲ್ ಮಾಡಿದ್ದರು. ಈ ವೇಳೆ ಹರ್ಷನ ಜೊತೆ ನಾವು ನಾಲ್ಕು ಜನ ಇದ್ದೆವು. ಹರ್ಷನಿಗೆ ಪದೇ ಪದೇ ಕಾಲ್ ಬರುತ್ತಿದ್ದಂತೆ ಹರ್ಷ ಕಾಲ್ ಕಟ್ ಮಾಡುತ್ತಿದ್ದ. ಆದರೆ ಅವರು ಮತ್ತೆ, ಮತ್ತೆ ನಾನು ನಿನ್ನ ಸ್ನೇಹಿತೆ ಎಂದು ಕಾಲ್ ಮಾಡುತ್ತಿದ್ದರು.

ನಾವು ಬೈಕ್ ತೆಗೆದುಕೊಂಡು ಊಟಕ್ಕೆ ಹೋಗೋಣ ಎಂದು ಹೇಳಿದಾಗ, ಇಲ್ಲ ನಡೆದು ಕೊಂಡು ಹೋಗೋಣ ಎಂದು ಹರ್ಷ ಹೇಳಿದ್ದ. ನಂತರ ಸ್ವಲ್ಪ ದೂರ ನಡೆದುಕೊಂಡು ಹೋದ ಮೇಲೆ ಹರ್ಷ ಬೈಕ್ ತೆಗೆದುಕೊಂಡು ಬನ್ನಿ ಎಂದು ನಮ್ಮನ್ನು ಕಳುಹಿಸಿದ ಬಳಿಕ ಘಟನೆ ನಡೆದಿದೆ. 2 ವಾರದಿಂದ ಹರ್ಷನನ್ನು ಆರೋಪಿಗಳು ಫಾಲೋ ಮಾಡಿದ್ದರು. ತನ್ನನ್ನು ಫಾಲೋ ಮಾಡುತ್ತಿರುವ ಬಗ್ಗೆ ಹರ್ಷನಿಗೂ ಅನುಮಾನವಿತ್ತು ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಕರೆ ಮಾಡಿದ ಹುಡುಗಿಯರು ಯಾರು ಎಂಬ ಮಾಹಿತಿ ಇನ್ನೂ ಸಿಕ್ಕಿಲ್ಲ. ಅಲ್ಲದೇ ಇದುವರೆಗೂ ಹರ್ಷನ ಫೋನ್ ಪತ್ತೆಯಾಗಿಲ್ಲ. ಪೊಲೀಸರು ಈ ಕುರಿತು ತನಿಖೆ ಪ್ರಾರಂಭಿಸಿದ್ದಾರೆ.