ಮೈಸೂರು/ ಕೋಲಾರ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇಂದು ಬೆಳಗ್ಗೆ ಕೋಲಾರ ವಿಧಾನಸಭಾ ಕ್ಷೇತ್ರದ ತಾಲೂಕು ಭೋವಿ ಸಮುದಾಯದ ಮುಖಂಡರು ಭೇಟಿಯಾಗಿ ಚುನಾವಣೆಗೆ ಕೋಲಾರದಿಂದ ಸ್ಪರ್ಧೆ ಮಾಡುವಂತೆ ಒತ್ತಾಯಿಸಿದ್ದಾರೆ.
ಮೈಸೂರಿನ ಆಂದೋಲನ ಸರ್ಕಲ್ ಬಳಿ ಇರುವ ರಾಮಕೃಷ್ಣ ಪಾರ್ಕ್ನಲ್ಲಿ ಸಿದ್ದರಾಮಯ್ಯ ವಾಕಿಂಗ್ ಮಾಡುವ ವೇಳೆ ಕೋಲಾರದ ಮುಖಂಡರು ಭೇಟಿ ಮಾಡಿದ್ದಾರೆ. 30ಕ್ಕೂ ಹೆಚ್ಚು ಮುಖಂಡರು ಸಿದ್ದರಾಮಯ್ಯ ಅವರಿಗೆ ಹೂ ಮಾಲೆ ಹಾಕಿ ಮುಂದಿನ ಚುನಾವಣೆಗೆ ನೀವು ಕೋಲಾರದಿಂದಲೇ ಸ್ಪರ್ಧೆ ಮಾಡಬೇಕು ಎಂದು ಒತ್ತಡ ಹಾಕಿದ್ದಾರೆ.
ಇನ್ನು ಇದೇ ವೇಳೆ ಮಾತನಾಡಿದ ಸಿದ್ದರಾಮಯ್ಯ, ಕೋಲಾರಕ್ಕೆ ಬರುವಂತೆ ಸಾಕಷ್ಟು ಒತ್ತಡಗಳು ಕೇಳಿಬರುತ್ತಿವೆ. ನವೆಂಬರ್ 11 ರಂದು ಕೋಲಾರಕ್ಕೆ ಬಂದು ಕಾರ್ಯಕರ್ತರೊಂದಿಗೆ, ಮುಖಂಡರೊಂದಿಗೆ ಚರ್ಚೆ ಮಾಡಲಾಗುವುದು ಎಂದರು.