ಗಣೇಶ ಹಬ್ಬಕ್ಕೆ ವಂಡರ್ ಲಾದಿಂದ ವಿಶೇಷ ಕೊಡುಗೆ – ನಿಮ್ಮ ಹೆಸರು ಗಣೇಶ ಆಗಿದ್ದರೆ ಉಚಿತ ಪ್ರವೇಶ…

89
firstsuddi

ಬೆಂಗಳೂರು : ದೇಶದಾದ್ಯಂತ ಇಂದು ಗಣೇಶ ಹಬ್ಬವನ್ನು ಆಚರಿಸಲಾಗುತ್ತಿದ್ದು, ಗಣೇಶ ಚತುರ್ಥಿ ದಿನದ ಅಂಗವಾಗಿ ವಂಡರ್ ಲಾ ವತಿಯಿಂದ ವಿಶೇಷ ಕೊಡುಗೆ ನೀಡಲು ಮುಂದಾಗಿದೆ.

ವಿಘ್ನನಿವಾರಕ ಗಣಪನ 108 ಹೆಸರುಗಳ ಪೈಕಿ ಯಾವುದೇ ಒಂದು ಹೆಸರು ನಿಮ್ಮದಾಗಿದ್ದರೆ ನೀವು ನಾಳೆ ಗಣೇಶನ ಹಬ್ಬದಂದು ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಪ್ರಸಿದ್ಧ ವಂಡರ್ ಲಾ ಅಮ್ಯೂಸ್ ಮೆಂಟ್ ಪಾರ್ಕ್ ಗೆ ಉಚಿತ ಪ್ರವೇಶ ಪಡೆಯಬಹುದು. ಮೊದಲು ಬರುವ 100 ಮಂದಿಗೆ ವಂಡರ್ ಲಾ ಅಮ್ಯೂಸ್ ಮೆಂಟ್ ಪಾರ್ಕ್ ಉಚಿತ ಪ್ರವೇಶ ಲಭಿಸಲಿದೆ. ಈ ಕೊಡುಗೆ ಪಡೆಯಲು ಅರ್ಹರಾಗಿರುವವರು ನಿಮ್ಮ ಹೆಸರನ್ನು ಸೂಚಿಸುವ ಯಾವುದಾದರೂ ಗುರುತಿನ ಚೀಟಿ ತರುವುದು ಕಡ್ಡಾಯ.

ಹೆಚ್ಚಿನ ವಿವರಗಳಿಗೆ ವಂಡರ್ ಲಾ ಅಮ್ಯೂಸ್ ಮೆಂಟ್ ಪಾರ್ಕ್ ದೂರವಾಣಿ ಸಂಖ್ಯೆ 080-37230333 ಮತ್ತು 080-35073966 ಮೂಲಕ ಸಂಪರ್ಕಿಸಬಹುದು.