ಗುಂಡು ಹಾರಿಸಿಕೊಂಡು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿ ಆತ್ಮಹತ್ಯೆ…

56
firstsuddi

ಸುರತ್ಕಲ್: ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿಯೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಣಂಬೂರಿನಲ್ಲಿರುವ ಎನ್.ಎಂ.ಪಿ.ಎ. ಮುಖ್ಯ ದ್ವಾರದ ಬಳಿ ನಡೆದಿರುವುದು ವರದಿಯಾಗಿದೆ.

ಮೃತರನ್ನು ರಾಯಚೂರು ನಿವಾಸಿ, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಸಬ್ ಇನ್ಸ್‍ಪೆಕ್ಟರ್ ಝಾಕಿರ್ ಹುಸೈನ್(58) ಎಂದು ಗುರುತಿಸಲಾಗಿದೆ. ಇವರು ನವ ಮಂಗಳೂರು ಬಂದರ್ ನ ಮುಖ್ಯ ದ್ವಾರದಲ್ಲಿ ರಾತ್ರಿ ಪಾಳಿಯ ಕೆಲಸ ನಿರ್ವಹಿಸಿದ್ದರು.

ನಿನ್ನೆ ಬೆಳಗ್ಗೆ 6:30ರ ಸುಮಾರಿಗೆ ತನ್ನ ಸರ್ವಿಸ್ ರಿವಾಲ್ವರ್​​​​ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.

ಪಣಂಬೂರು ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಪ್ರಕರಣದ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.