ಕಲಬುರಗಿ : ಚಲಿಸುತ್ತಿದ್ದ ಗೂಡ್ಸ್ ರೈಲಿಗೆ ಸಿಲುಕಿದ ತಾಯಿ ಮಗ ಪ್ರಾಣಾಪಾಯದಿಂದ ಪಾರಾದ ಘಟನೆ ಕಲಬುರಗಿ ರೈಲ್ವೆ ನಿಲ್ದಾಣದಲ್ಲಿ ನಿನ್ನೆ ರಾತ್ರಿ ನಡೆದಿದೆ.
ಪ್ಲಾಟ್ ಫಾರಂನಿಂದ ಮಹಿಳೆ ರೈಲು ಹಳಿ ದಾಟಲು ಮುಂದಾಗಿದ್ದರು. ಈ ವೇಳೆ ಗೂಡ್ಸ್ ರೈಲು ಬರೋದನ್ನು ನೋಡಿ ತಾಯಿಯನ್ನು ರಕ್ಷಿಸಲು ಮಗ ಮುಂದಾಗಿದ್ದಾರೆ. ಹಳಿ ಪಕ್ಕದ ಸ್ವಲ್ಪ ಜಾಗದಲ್ಲಿ ತಾಯಿ ಮತ್ತು ಮಗ ಅವಚಿ ಕುಳಿತು ಜೀವ ಉಳಿಸಿಕೊಂಡಿದ್ದಾರೆ. ಈ ಭಯಾನಕ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.










