ಕಾರವಾರ: ಪ್ರವಾಸಕ್ಕೆಂದು ಆಗಮಿಸಿದ್ದ ಜಪಾನ್ ಮೂಲದ ಮಹಿಳೆ ನಾಪತ್ತೆಯಾದ ಘಟನೆ ಗೋಕರ್ಣದಲ್ಲಿ ನಡೆದಿದೆ.
ಎಮಿ ಯಮಾಝಕಿ(40) ಕಾಣೆಯಾದ ಮಹಿಳೆ. ಫೆ.5ರಂದು ಗೋಕರ್ಣದ ಬಂಗ್ಲೆಗುಡ್ಡದ ನೇಚರ್ ಕ್ಯಾಂಪಸ್ನಲ್ಲಿ ತನ್ನ ಪತಿಯ ಜೊತೆ ಮಹಿಳೆ ತಂಗಿದ್ದರು. ಮರುದಿನ ಮುಂಜಾನೆ 10.30ರ ಸಮಯಕ್ಕೆ ನೇಚರ್ ಕ್ಯಾಂಪಸ್ ನಿಂದ ಹೊರ ಹೋಗಿದ್ದ ಮಹಿಳೆ ನಾಪತ್ತೆಯಾಗಿದ್ದಾರೆ.
ಈ ಕುರಿತು ಮಹಿಳೆಯ ಪತಿ ದೈ ಯಮಾಝಕಿ ಗೋಕರ್ಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.










