ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಇಲ್ಲದೇ, ಇನ್ನು ಗ್ರಾಮ ಅಭಿವೃದ್ದಿ ಹೇಗೆ ಸಾಧ್ಯ: ಸಂಜಯ್ ಕೊಟ್ಟಿಗೆಹಾರ.

58

ಮೂಡಿಗೆರೆ: ತಾಲೂಕಿನ ತರುವೆ ಗ್ರಾಮ ಪಂಚಾಯಿತಿಗೆ ಕಾಯಂ ಪಂಚಾಯತ್ ಅಭಿವೃದ್ದಿ ಅಧಿಕಾರಿ ನೇಮಕ ಮಾಡುವಂತೆ ಆಗ್ರಹಿಸಿ ಗ್ರಾಮಸ್ಥರಾದ ಸಂಜಯ್ ಕೊಟ್ಟಿಗೆಹಾರ ಎಂಬುವವರು ಏಕಾಂಗಿ ಪ್ರತಿಭಟನೆ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಇವರು ತರುವೆ ಗಾಮ ಪಂಚಾಯಿತಿಯಲ್ಲಿ 2 ವರ್ಷಗಳಿಂದ ಸಭೆ ನಡೆದಿಲ್ಲ ಪಿಡಿಒ ಇಲ್ಲದೆ ಯಾವ ಕೆಲಸ ಕಾರ್ಯಗಳೂ ನಡೆಯುತ್ತಿಲ್ಲ ಹಲವು ಗ್ರಾಮಗಳಲ್ಲಿ ಕುಡಿಯುವ ನೀರು ರಸ್ತೆ ಸಮಸ್ಯೆಯಿದ್ದು ಪಂಚಾಯಿತಿ ಅಭಿವೃದ್ದಿ ಅಧೀಕಾರಿಗಳು ಇಲ್ಲದೇ ಇನ್ನು ಪಂಚಾಯಿತಿ ಅಭಿವೃದ್ದಿ ಆಗಲು ಹೇಗೆ ಸಾಧ್ಯ ಹಲವು ಬಾರಿ ಶಾಸಕರ ಗಮನಕ್ಕೆ ತಂದರು ಏನು ಪ್ರಯೋಜನವಾಗಿಲ್ಲ ಕಾಯಂ ಪಿಡಿಒ ಇಲ್ಲದೆ 18ನೇ ಹಣಕಾಸು ಆರೋಗದ ಹಣ ಪ್ರಯೋಜನವಾಗುತ್ತಿಲ್ಲ ಈ ಬಗ್ಗೆ ಕೂಡಲೇ ಶಾಸಕರು ಹಾಗೂ ಸರ್ಕಾರ ಕಾಯಂ ಪಿಡಿಒ ನೇಮಕಾತಿ ಮಾಡಬೇಕು ಇಲ್ಲದಿದ್ದರೆ ಏಕಾಂಗಿ ಹೋರಾಟ ಮುಂದುವರೆಸೊ ಎಚ್ಚರಿಕೆ ನೀಡಿದ್ದಾರೆ.