ಚಂದ್ರಯಾನ-2 ಉಡಾವಣೆಗೆ ಸಮಯ ನಿಗಧಿಪಡಿಸಿದ ಇಸ್ರೋ…

416
firstsuddi

ನವದೆಹಲಿ : ಜುಲೈ 15ರಂದು ಉಡಾವಣೆಯಾಗಬೇಕಿದ್ದ ಚಂದ್ರಯಾನ-2 ಉಡಾವಣೆಯನ್ನು ತಾಂತ್ರಿಕ ದೋಷದಿಂದ ರದ್ದುಗೊಳಿಸಲಾಗಿತ್ತು. ಜುಲೈ 15ರಂದು ಬೆಳಿಗ್ಗೆ 2:51ಕ್ಕೆ ಚಂದ್ರಯಾನ-2 ಉಡಾವಣೆಯಾಗಬೇಕಿತ್ತು. ಆದರೆ ಉಡಾವಣೆಗೆ 56ನಿಮಿಷ 24 ಸೆಕೆಂಡ್ ಇರುವಾಗ ಉಡಾವಣಾ ವಾಹನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಚಂದ್ರಯಾನ-2 ಉಡಾವಣೆಯನ್ನು ರದ್ದುಗೊಳಿಸಲಾಗಿದ್ದು, ಶೀಘ್ರವೇ ಮುಂದಿನ ಉಡಾವಣಾ ಸಮಯವನ್ನು ನಿಗಧಿಪಡಿಸುವುದಾಗಿ ಹೇಳಿತ್ತು. ಈ ಕುರಿತು ಇಂದು ಟ್ವೀಟ್ ಮಾಡಿರುವ ಇಸ್ರೋ “ ಜುಲೈ 15, 2019ರಂದು ತಾಂತ್ರಿಕ ದೋಷದಿಂದ ರದ್ದುಗೊಳಿಸಲಾಗಿದ್ದ ಚಂದ್ರಯಾನ-2 ಉಡಾವಣೆಯನ್ನು ಈಗ ಜುಲೈ 22, 2019 ಸೋಮವಾರ ಮಧ್ಯಾಹ್ನ 2:43ಕ್ಕೆ ಐಎಸ್‍ಟಿಗೆ ಮರು ನಿಗಧಿಪಡಿಸಲಾಗಿದೆ ಎಂದು ಟ್ವೀಟ್ ಮಾಡಿದೆ.