ಚಂದ್ರಶೇಖರ್ ಸಾವು ಪ್ರಕರಣ – ವಿನಯ್ ಗುರೂಜಿ ಆಶ್ರಮಕ್ಕೆ ಭೇಟಿ ನೀಡಿ ಮಾಹಿತಿ ಕಲೆಹಾಕಿದ ಪೊಲೀಸರು…

74
firstsuddi

ಚಿಕ್ಕಮಗಳೂರು : ಹೊನ್ನಾಳಿ ಶಾಸಕ ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರಶೇಖರ್ ಸಾವು ನಾನಾ ಅನುಮಾನಗಳನ್ನು ಹುಟ್ಟಿಹಾಕಿವೆ. ಈ ಹಿನ್ನೆಲೆಯಲ್ಲಿ ತನಿಖೆ ಚುರುಕುಗೊಂಡಿದ್ದು, ಚನ್ನಗಿರಿ ಪೊಲೀಸರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿರುವ ಗೌರಿಗದ್ದೆಯ ವಿನಯ್ ಗುರೂಜಿ ಆಶ್ರಮಕ್ಕೆ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ. ಆಶ್ರಮದ ಸಿಬ್ಬಂದಿ, ಉಸ್ತುವಾರಿ ವಹಿಸಿರುವ ಭಕ್ತರ ವಿಚಾರಣೆ ನಡೆಸಿದ್ದಾರೆ. ಪ್ರಕರಣ ಸಂಬಂಧ ಈವರೆಗೂ 4 ಬಾರಿ ಪೊಲೀಸರು ಭೇಟಿ ನೀಡಿದ್ದಾರೆ.

ಇದು ಕೊಲೆಯಲ್ಲ, ಅಪಘಾತದಿಂದ ಉಂಟಾದ ಸಾವು ಎಂಬುದು ಪೊಲೀಸ್ ಹಾಗೂ ಎಫ್ ಎಸ್ ಎಲ್ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗುತ್ತಿದೆ. ಆದರೆ ರೇಣುಕಾಚಾರ್ಯ ಕುಟುಂಬಸ್ಥರು ಮಾತ್ರ ಇದೊಂದು ಪೂರ್ವನಿಯೋಜಿತ ಕೊಲೆ ಅಂತ ಆರೋಪ ಮಾಡಿರೋದೇ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿರೋದು. ಈಗಾಗಲೇ ಘಟನೆ ಸಂಬಂಧ ಹೊನ್ನಾಳಿ ಪೊಲೀಸ್ ಠಾಣೆ ಯಲ್ಲಿ 302 ಹಾಗೂ 201 ಕೇಸ್ ಕೂಡ ದಾಖಲಾಗಿದೆ.

ಇತ್ತ ಚಂದ್ರು ಸಾವಿಗೆ ನಿಖರವಾದ ಕಾರಣ ಇಂದು ಪೋಸ್ಟ್ ಮಾರ್ಟಂ ವರದಿ ಬಂದ ನಂತರ ಗೊತ್ತಾಗಲಿದೆ. ಇಂದು ಸಂಜೆಯೊಳಗೆ ಮರಣೋತ್ತರ ಪರೀಕ್ಷಾ ವರದಿ ಪೊಲೀಸರ ಕೈ ಸೇರೋ ಸಾಧ್ಯತೆ ಇದೆ.