ಚಿಕ್ಕಮಗಳೂರು : ಕಾಡು ಕುರಿಯನ್ನು ನುಂಗಿ ಮಲಗಿದ್ದ ಹೆಬ್ಬಾವನ್ನು ಕೊಪ್ಪ ತಾಲ್ಲೂಕಿನ ವಗಳೆ ನಾಗರಾಜ್ ಎಂಬುವವರ ಕಾಫಿ ತೋಟದಲ್ಲಿ ಸೆರೆ ಹಿಡಿಯಲಾಗಿದ್ದು, ಸುಮಾರು ೭೫ ಕೆ.ಜಿ. ತೂಕವಿದ್ದ ಹೆಬ್ಬಾವನ್ನು ಕಂಡು ಮಲೆನಾಡಿಗರು ನಿಟ್ಟುಸಿರು ಬಿಟ್ಟಿದ್ದಾರೆ. ತೋಟದಲ್ಲಿ ಮಲಗಿದ್ದ ಹೆಬ್ಬಾವನ್ನು ಕಂಡ ಸ್ಥಳೀಯರು ಉರಗ ತಜ್ಞ ಹರೀಂದ್ರಾ ಅವರಿಗೆ ತಿಳಿಸಿದ್ದು, ಮಾಹಿತಿ ತಿಳಿದು ಕೂಡಲೇ ಸ್ಥಳಕ್ಕೆ ಧಾವಿಸಿದ ಹರೀಂದ್ರ ಅವರು ಸತತ ಒಂದು ಗಂಟೆ ಕಾರ್ಯಾಚರಣೆ ನಡೆಸಿ ಅರಣ್ಯಾಧಿಕಾರಿಗಳ ಸಹಕಾರದೊಂದಿಗೆ ಹೆಬ್ಬಾವನ್ನು ಸೆರೆ ಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ.










