ಚಿಕ್ಕಮಗಳೂರು : ಕೆಎಸ್ ಆರ್ ಟಿಸಿ ಬಸ್ ಹಿಂದಿನ ಚಕ್ರಕ್ಕೆ ಸಿಲುಕಿ ವ್ಯಕ್ತಿ ಸ್ಥಳದಲ್ಲೇ ಸಾವು…

318

ಚಿಕ್ಕಮಗಳೂರು  : ರಸ್ತೆ ದಾಟುತ್ತಿದ್ದ ಪಾದಚಾರಿ ಮೇಲೆ ಕೆಎಸ್ ಆರ್ ಟಿಸಿ ಬಸ್ ಗುದ್ದಿರುವ ಘಟನೆ ಚಿಕ್ಕಮಗಳೂರು ನಗರದ ಅಜಾದ್ ಪಾರ್ಕ್ ವೃತ್ತದಲ್ಲಿ ನಡೆದಿದ್ದು, ಸಾವನಪ್ಪಿರೋ ವ್ಯಕ್ತಿ ಶಂಭುಲಿಂಗಪ್ಪ (74) ಎಂದು ಗುರುತಿಸಲಾಗಿದೆ. ಶಂಭುಲಿಂಗಪ್ಪ ಮುಗುಳುವಳ್ಳಿ ಗ್ರಾಮದ ನಿವಾಸಿ ಹಾಗೂ ನಿವೃತ್ತ ಶಿಕ್ಷಕ ಎನ್ನಲಾಗಿದೆ.ಚಿಕ್ಕಮಗಳೂರಿನಿಂದ ಜಾವಗಲ್ ಗೆ ತೆರಳುತ್ತಿದ್ದ ಬಸ್ ಇದ್ದಾಗಿದ್ದು ಬಸ್ ಚಾಲಕನ ಅಜಾಗ್ರುಕತೆಯಿಂದ ಅಪಘಾತ ನಡೆದಿದೆ ಎನ್ನಲಾಗಿದ್ದು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.