ಮೂಡಿಗೆರೆ : ತಾಲ್ಲೂಕಿನ ಸಬ್ಬೇನಹಳ್ಳಿಯಿಂದ ಕುಂದೂರಿಗೆ ಹೋಗುವ 10 ಕಿಲೋ ಮೀಟರ್ ರಸ್ತೆ ಬೃಹತ್ ಆಕಾರವಾದ ಗುಂಡಿಗಳು ಅಮಾಯಕ ವಾಹನ ಸವಾರರ ಪ್ರಾಣಕ್ಕೆ ಎರವಾಗುತ್ತಿದೆ.
ತಾಲ್ಲೂಕಿನ ಸಬ್ಬೇನಹಳ್ಳಿಯಿಂದ ಕುಂದೂರು ವರೆಗೆ ರಸ್ತೆ ಸಂಪೂರ್ಣ ಹಾಳಾಗಿದ್ದು, ರಸ್ತೆಯಲ್ಲಿ ಭಾರಿ ಗುಂಡಿಗಳಿದ್ದು, ಗುಂಡಿಗಳನ್ನು ಗಮನಿಸದ ಅನೇಕ ವಾಹನ ಸವಾರರು ಗುಂಡಿಗೆ ವಾಹನವನ್ನು ಹಾಕಿಕೊಂಡು ಸಣ್ಣ ಪುಟ್ಟ ಗಾಯವಾಗುತ್ತಿದ್ದರೆ, ಇದಕ್ಕೆ ಪುಷ್ಠಿ ನೀಡುವಂತೆ ಕುಂದೂರು ದೊಡ್ಡಹಳ್ಳ ಸಮೀಪ ಶನಿವಾರ ಬೆಳಿಗ್ಗೆ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ದೊಡ್ಡೇಗೌಡ ಹಾಗೂ ಉಮೇಶ ಎಂಬುವವರು ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಗುಂಡಿಯನ್ನು ಗಮನಿಸದೆ ಬೈಕ್‍ನಿಂದ ಬಿದ್ದು ತೀವ್ರಗತಿ ಗಾಯವಾಗಿದ್ದು, ಗಾಯಾಳುಗಳಿಗೆ ಸ್ಥಳೀಯರಾದ ಕುಂದೂರು ಲಕ್ಷ್ಮಣ್ ಅವರು ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕಳುಹಿಸಿಕೊಟ್ಟಿದ್ದಾರೆ. ಈ ಕುರಿತು ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ಲಕ್ಷ್ಮಣ್ ಅವರು, ಗುಂಡಿ ಬಿದ್ದಿರುವುದು ಇಂದು ನಿನ್ನೆ ಅಲ್ಲ. ವರ್ಷ ಕಳೆದಿದೆ. ಇದೇ ರಸ್ತೆಯಲ್ಲಿ ಅನೇಕ ಜನಪ್ರತಿನಿಧಿಗಳು ಸಂಚರಿಸುತ್ತಾರೆ. ಸ್ಥಳಿಯ ಶಾಸಕರು, ಸಚಿವರು ಕೂಡಾ ಈ ರಸ್ತೆಯಲ್ಲೇ ಸಂಚರಿಸುತ್ತಾರೆ. ಯಾರೂ ಈ ಬಗ್ಗೆ ಗಮನ ಹರಿಸುತ್ತಿಲ್ಲ. ರಸ್ತೆ ಮಧ್ಯದಲ್ಲಿಯೇ ಭಾರಿ ಗುಂಡಿಗಳು ಇರುವುದರಿಂದ ವಾಹನವನ್ನು ಓಡಿಸುವುದೇ ಕಷ್ಟವಾಗಿದೆ. ಅದರಲ್ಲೂ ಧ್ವಿಚಕ್ರ ವಾಹನ ಓಡಿಸಲು ಅಸಾಧ್ಯವಾಗಿದೆ. ಹಲವು ಅಮಾಯಕರು ಇಲ್ಲಿ ಬಿದ್ದು ಕಾಲು, ಕೈ ಮುರಿಹಜದುಕೊಂಡಿದ್ದಾರೆ. ಜನಪ್ರತಿನಿಧಿಗಳೇ ಯಾರಾದರು ಬಲಿಯಾಗಬೇಕಾ? ಅಥವಾ ಇನ್ನೆಷ್ಟು ಮಂದಿ ಬಿದ್ದು ಗಾಯಗೊಳ್ಳಬೇಕ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ಹಳೇಹಳ್ಳಿ ಅರ್ಜುನ್ ೊಕ್ಕಳ್ಳಿಯಿಂದ ದಿನನಿತ್ಯ ಕುಂದೂರು ಶಾಲೆಗೆ ತೆರಳುವ ಮಕ್ಕಳು ಹಾಗೂ ಆ ಭಾಗದಿಂದ ಮೂಡಿಗೆರೆ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ. ಹಲವು ಬಾರಿ ಶಾಸಕರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಇದಕ್ಕೆಲ್ಲಾ ಕಾರಣ ಕಳಪೆ ಕಾಮಗಾರಿ. ಇನ್ನಾದರೂ ಜನಪ್ರತಿನಿಧಿಗಳು ಎಚ್ಚೆತ್ತು ಚ ಪ್ರಾಣ ಉಳಿಸಬೇಕು. ಇಲ್ಲದಿದ್ದರೆ ಸಂಘ ಸಂಸ್ಥೆಗಳು, ಸಂಘಟನೆಗಳ ಜೊತೆಗೂಡಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.










