ಚಿಕ್ಕಮಗಳೂರು: ನಗರಸಭೆ ಮಾಜಿ ಸದಸ್ಯೆ ಪಾರ್ವತಮ್ಮ ಕೃಷ್ಣಮೂರ್ತಿ ನಿಧನ…

65
firstsuddi

ಚಿಕ್ಕಮಗಳೂರು: ನಗರಸಭೆ ಮಾಜಿ ಸದಸ್ಯೆ, ಹಿರೇಮಗಳೂರಿನ ಗ್ರಾಮದೇವತೆ ಪ್ಲೇಗಿನಮ್ಮ, ಕರಾಳಮ್ಮ, ಅಂತರ ಘಟ್ಟಮ್ಮ ದೇವಾಲಯದ ಪ್ರಧಾನ ಅರ್ಚಕ ದಿ.ಕೃಷ್ಣಮೂರ್ತಿ ಅವರ ಪತ್ನಿ ಪಾರ್ವತಮ್ಮ ಕೃಷ್ಣಮೂರ್ತಿ(81) ಅವರು ಹಿರೇಮಗಳೂರಿನ ಸ್ವಗೃಹದಲ್ಲಿ ಇಂದು ಬೆಳಿಗ್ಗೆ ನಿಧನರಾದರು.

ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಬಿಟ್ಟಗಲಿದ್ದಾರೆ.

ಪಾರ್ವತಮ್ಮ ಹಾಗೂ ಕೃಷ್ಣಮೂರ್ತಿ ದಂಪತಿಗಳಿಬ್ಬರೂ ನಗರಸಭೆ ಸದಸ್ಯರಾಗಿ ಸಮಾಜ ಸೇವಕರಾಗಿ ಜನಮನ್ನಣೆ ಗಳಿಸಿದ್ದರು. ಶಾಸಕ ಎಚ್.ಡಿ.ತಮ್ಮಯ್ಯ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಮೃತರ ಮನೆಗೆ ತೆರಳಿ ಅಂತಿಮ ದರ್ಶನ ಪಡೆದರು. ಹಿರೇಮಗಳೂರಿನ ರುದ್ರಭೂಮಿಯಲ್ಲಿ ಸಂಜೆ ಮೃತರ ಅಂತ್ಯಸಂಸ್ಕಾರ ನಡೆಯಿತು.