ಚಿಕ್ಕಮಗಳೂರು: ಶುದ್ದ ಅಮ್ಲಜನಕ ಮತ್ತು ಉತ್ತಮ ಪರಿಸರಕ್ಕಾಗಿ ಹಾವುಗಳನ್ನು ಸಂರಕ್ಷಿಸಬೇಕು : ಸ್ನೇಕ್ ನರೇಶ್…

247
firstsuddi

ಚಿಕ್ಕಮಗಳೂರು: ಶುದ್ದ ಅಮ್ಲಜನಕ ಮತ್ತು ಉತ್ತಮ ಪರಿಸರಕ್ಕಾಗಿ ಹಾವುಗಳನ್ನು ಸಂರಕ್ಷಿಸಬೇಕು ಎಂದು ಸ್ನೇಕ್ ನರೇಶ್ ಸಲಹೆ ಮಾಡಿದರು.ಭಾರತ ಸೇವಾದಳದ ಜ್ಞಾನ ಜ್ಯೋತಿ ಘಟಕ ನಗರದ ಆಜಾದ್ ಪಾರ್ಕ್ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ನಡೆಸುತ್ತಿರುವ ಉಚಿತ ಮಕ್ಕಳ ಬೇಸಿಗೆ ಶಿಬಿರದಲ್ಲಿ ಬುಧವಾರ ಅವರು ಹಾವುಗಳ ಸಂರಕ್ಷಣೆ ಕುರಿತು ಮಾತನಾಡಿದರು.
ಹಾವುಗಳು ರೈತರ ಮಿತ್ರ ಅವುಗಳಿಂದ ಭೂಮಿಯಲ್ಲಿರುವ ಇಲಿಗಳು ಮತ್ತು ವಿಷದ ಹುಳುಗಳ ಸಂತಾನ ಕಡಿಮೆಯಾಗುತ್ತದೆ. ವಾತಾವರಣದಲ್ಲಿರುವ ವಿಷವನ್ನು ಉಸಿರಿನ ಮೂಲಕ ಒಳಗೆಳೆದುಕೊಳ್ಳುವ ಹಾವುಗಳು ಶುದ್ದ ಅಮ್ಲಜನಕವನ್ನು ವಾತಾವರಣಕ್ಕೆ ಬಿಡುತ್ತವೆ, ಇದರಿಂದಾಗಿ ಕಲುಶಿತವಾತಾವರಣ ಶುದ್ದವಾಗುತ್ತದೆ ಎಂದು ಹೇಳಿದರು.
ಇದೇ ವೇಳೆ ವಿವಿಧ ಜಾತಿಯ ಹಾವುಗಳನ್ನು ಮಕ್ಕಳಿಗೆ ಪ್ರದರ್ಶಿಸುವ ಮೂಲಕ ಅವುಗಳ ಬಗ್ಗೆ ಮಾಹಿತಿ ನೀಡಿದ ಅವರು ಹಾವುಗಳು ಯಾವುದೇ ಕಾರಣಕ್ಕೂ ಯಾರಿಗೂ ಸುಮ್ಮನೆ ಕಚ್ಚುವುದಿಲ್ಲ ಗಾಬರಿಗೆ ಅಥವಾ ಅತ್ಮ ರಕ್ಷಣೆಗಾಗಿ ಅವು ಕಚ್ಚುತ್ತವೆ ಎಂದು ತಿಳಿಸಿದರು.
ಭಾರತ ಸೇವಾದಳದ ತಾಲೂಕು ಸಂಘಟಕ, ಶಿಬಿರದ ರೂವಾರಿ ಎಸ್.ಈ ಲೋಕೇಶ್ವರಾಚಾರ್ ಮಾತನಾಡಿ ಈ ಭೂಮಿಯ ಮೇಲೆ ಬದುಕಲು ಮನುಷ್ಯರಿಗಿರುವಷ್ಟೆ ಹಕ್ಕು ಪ್ರಾಣಿ ಪಕ್ಷಿಗಳಿಗೂ ಇದೆ ಎಂದರು.
ಉತ್ತಮ ಪರಿಸರಕ್ಕಾಗಿ ಕಾಡು ಮತ್ತು ವನ್ಯ ಜೀವಿಗಳನ್ನು ಸಂರಕ್ಷಿಸುವ ಅಗತ್ಯವಿದೆ ಎಂದ ಅವರು ಈಗಲಾದರು ಎಚ್ಚೆತ್ತು ಅರಣ್ಯ ಮತ್ತು ಪ್ರಾಣಿಸಂಕುಲವನ್ನು ರಕ್ಷಿಸದಿದ್ದಲ್ಲಿ ನಮ್ಮ ಮುಂದಿನ ಪಿಳಿಗೆ ಅವುಗಳನ್ನು ಚಿತ್ರದಲ್ಲಿ ಮಾತ್ರ ನೋಡಬೇಕಾಗುತ್ತದೆ ಎಂದು ಎಚ್ಚರಿಸಿದರು.