ಬೆಂಗಳೂರು : ವಿಧಾನಸಭಾ ಚುನಾವಣೆಗೆ ಇನ್ನು ಮೂರು ತಿಂಗಳಿರುವಾಗ ಮಂಡ್ಯ ಜಿಲ್ಲೆಯ ಉಸ್ತುವಾರಿ ಹೊಣೆಯನ್ನು ಸಚಿವ ಆರ್ ಅಶೋಕ್ ಹೆಗಲಿಗೆ ವಹಿಸಲಾಗಿದೆ. ಈ ಮೂಲಕ ಮಂಡ್ಯದಲ್ಲಿ ಚುನಾವಣಾ ರಣತಂತ್ರದ ಜವಾಬ್ದಾರಿಯೂ ಸಚಿವ ಆರ್. ಅಶೋಕ್ ಅವರ ಹೆಗಲೇರಲಿದೆ.
ಇಲ್ಲಿಯವರೆಗೆ ಮಂಡ್ಯ ಜಿಲ್ಲೆಗೆ ಸಚಿವ ಕೆ. ಗೋಪಾಲಯ್ಯ ಉಸ್ತುವಾರಿ ವಹಿಸಿದ್ದರು. ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರು ಮಂಡ್ಯ ಜಿಲ್ಲೆ ಉಸ್ತುವಾರಿಯನ್ನು ಸಚಿವ. ಆರ್ ಅಶೋಕ್ ಅವರಿಗೆ ವಹಿಸಿದ್ದಾರೆ. ಗೋಪಾಲಯ್ಯ ಹಾಸನ ಜಿಲ್ಲೆ ಜೊತೆಗೆ ಮಂಡ್ಯ ಜಿಲ್ಲೆಯ ಉಸ್ತುವಾರಿಯನ್ನು ನಿಭಾಯಿಸುತ್ತಿದ್ದರು.
ಮಂಡ್ಯದಲ್ಲಿ ಪಕ್ಷ ಸಂಘಟನೆ ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿ ಸಚಿವ ಆರ್.ಅಶೋಕ್ ಅವರಿಗೆ ಉಸ್ತುವಾರಿ ಜವಾಬ್ದಾರಿ ವಹಿಸಲಾಗಿದೆ. ಸ್ವತಃ ಹೈಕಮಾಂಡ್ ಆರ್.ಅಶೋಕ್ ಗೆ ಮಂಡ್ಯ ಉಸ್ತುವಾರಿ ನೀಡುವಂತೆ ಸೂಚನೆ ನೀಡಿತ್ತು ಎನ್ನಲಾಗಿದೆ. ಚುನಾವಣೆ ಹೊಸ್ತಿಲಲ್ಲಿ ಮಂಡ್ಯದಲ್ಲಿ ಪಕ್ಷ ಸಂಘಟನೆ ಮಾಡುವುದಕ್ಕಾಗಿ ಆರ್.ಅಶೋಕ್ ಗೆ ಈ ಹೊಣೆಯನ್ನು ಹೈಕಮಾಂಡ್ ನೀಡಿದೆ ಎಂದು ತಿಳಿದುಬಂದಿದೆ.
ಈಗ ಸಚಿವ ಆರ್ ಅಶೋಕ್ ಗೆ ಜೆಡಿಎಸ್ ಭದ್ರಕೋಟೆಯಲ್ಲಿ ಹೆಚ್ಚು ಸೀಟು ಗೆಲ್ಲಿಸುವ ಸವಾಲೆದುರಾಗಿದೆ. ಜೊತೆಗೆ ಮಂಡ್ಯದಲ್ಲಿ ಆಪರೇಷನ್ ಕಮಲ ಸಕ್ಸಸ್ ಮಾಡುವ ಜವಾಬ್ದಾರಿಯೂ ಹೆಗಲಿಗೆ ಏರಿದೆ. ಕೈ-ತೆನೆ ಪಕ್ಷಗಳ ಪ್ರಭಾವಿಗಳನ್ನು ಪಕ್ಷಕ್ಕೆ ಕರೆತರುವ ಬಿಗ್ ಟಾಸ್ಕ್ ಅನ್ನು ಎಷ್ಟರ ಮಟ್ಟಿಗೆ ಅಶೋಕ್ ನಿಗಾವಹಿಸುತ್ತಾರೆ ಅನ್ನೋದು ಕಾದು ನೋಡಬೇಕಿದೆ.










