ಜಮ್ಮು –ಕಾಶ್ಮೀರ : ಮಾಜಿ ಪೊಲೀಸ್ ವಿಶೇಷಾಧಿಕಾರಿ, ಪತ್ನಿ, ಮಗಳನ್ನು ಗುಂಡಿಕ್ಕಿ ಕೊಂದ ಉಗ್ರರು…

84
firstsuddi

ಪುಲ್ವಾಮ : ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಮಾಜಿ ಪೊಲೀಸ್ ವಿಶೇಷಾಧಿಕಾರಿ (ಎಸ್ ಪಿಒ) ಮನೆಗೆ ನುಗ್ಗಿ ಗುಂಡಿನ ದಾಳಿ ನಡೆಸಿದ್ದಾರೆ. ಆವಂತಿಪೋರಾದ ಹರಿಪರಿಗಂ ನಲ್ಲಿರುವ ಫಯಾಜ್ ಅಹಮದ್ ಅವರ ಮನೆಗೆ ನುಗ್ಗಿದ ಉಗ್ರರು ಅಧಿಕಾರಿ ಮತ್ತು ಅವರ ಪತ್ನಿ, ಪುತ್ರಿ ಯನ್ನು ಹತ್ಯೆ ಮಾಡಿದ್ದಾರೆಂದು ತಿಳಿದುಬಂದಿದೆ.

ನಿನ್ನೆ ರಾತ್ರಿ ಸುಮಾರು 11 ಗಂಟೆಗೆ ಫಯಾಜ್ ಅಹಮದ್ ಅವರ ಮನೆಗೆ ನುಗ್ಗಿದ ಉಗ್ರರು ಫಯಾಜ್ ಮತ್ತು ಅವರ ಕುಟುಂಬದ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಫಯಾಜ್ ಅಹಮದ್ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಪತ್ನಿ ರಾಜಾ ಬೇಗಂ ಹಾಗೂ ಮಗಳು ರಫಿಯಾ ಅನಂತನಾಗ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ನಾಪತ್ತೆಯಾದ ಉಗ್ರರ ಪತ್ತೆ ಕಾರ್ಯಚರಣೆ ನಡೆಯುತ್ತಿದೆ ಎಂದು ಜಮ್ಮು-ಕಾಶ್ಮೀರ ವಲಯದ ಪೊಲೀಸರು ತಿಳಿಸಿದ್ದಾರೆ.