ನವದೆಹಲಿ : ಶ್ರದ್ಧಾ ವಾಕರ್ ಹತ್ಯೆ ಆರೋಪಿ ಅಫ್ತಾಬ್ ಪೂನಾವಾಲಾ ಇಂದು ಜಾಮೀನು ಅರ್ಜಿಯನ್ನು ಹಿಂಪಡೆದಿದ್ದಾನೆ. ತನ್ನ ಒಪ್ಪಿಗೆಯಿಲ್ಲದೇ ಜಾಮೀನು ಅರ್ಜಿಯನ್ನು ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾನೆ.
ಅಫ್ತಾಬ್ ನೊಂದಿಗೆ 50 ನಿಮಿಷಗಳ ಸುದೀರ್ಘ ಚರ್ಚೆಯ ನಂತರ ಜಾಮೀನು ಅರ್ಜಿಯನ್ನು ಹಿಂಪಡೆಯಲು ನಿರ್ಧರಿಸಿರುವುದಾಗಿ ಅಫ್ತಾಬ್ ಪರ ವಕೀಲ ಎಂ.ಎಸ್ ಖಾನ್ ನ್ಯಾಯಾಲಯಕ್ಕೆ ತಿಳಿಸಿದರು.
ಡಿಸೆಂಬರ್ 16 ರಂದು ಜಾಮೀನು ಕೋರಿ ಅಫ್ತಾಬ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ. ಡಿಸೆಂಬರ್ 9 ರಂದು ನ್ಯಾಯಾಲಯವು ಪೂನಾವಾಲಾ ನ್ಯಾಯಾಂಗ ಬಂಧನವನ್ನು 14 ದಿನಗಳವರೆಗೆ ವಿಸ್ತರಿಸಿತ್ತು. ನವೆಂಬರ್ 12 ರಂದು ಆತನನ್ನು ಬಂಧಿಸಲಾಗಿದ್ದು, ಪ್ರಸ್ತುತ ತಿಹಾರ್ ಜೈಲಿನಲ್ಲಿ ಆತ ಬಂಧಿಯಾಗಿದ್ದಾನೆ.
ಅಫ್ತಾಬ್ ಅಮಿನ್ ಪೂನಾವಾಲಾ 2022ರ ಮೇ 18 ರಲ್ಲಿ ತನ್ನ ಪ್ರೇಯಸಿ ಶ್ರದ್ಧಾ ವಾಕರ್ ನನ್ನು ಹತ್ಯೆ ಮಾಡಿ, ದೇಹವನ್ನು 35 ತುಂಡುಗಳಾಗಿ ಪೀಸ್ ಪೀಸ್ ಮಾಡಿ ದೆಹಲಿಯ ಕಾಡಿನಲ್ಲಿ ಎಸೆದಿದ್ದ.










