ದುಬೈ : ಮೊದಲ ಬಾರಿಗೆ ಟಿ-20 ವಿಶ್ವಕಪ್‍ನಲ್ಲಿ ಗೆದ್ದ ಆಸ್ಟ್ರೇಲಿಯಾ ತಂಡದ ಆಟಗಾರರು ವಿಭಿನ್ನವಾಗಿ ಸಂಭ್ರಮಾಚರಣೆ ಮಾಡಿದ್ದು, ಶೂನಲ್ಲಿ ಬಿಯರ್ ಕುಡಿದಿದ್ದಾರೆ.
ನಿನ್ನೆ ನಡೆದ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವಿನ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ನ್ಯೂಜಿಲೆಂಡ್ ತಂಡವನ್ನು 8 ವಿಕೆಟ್ ಗಳಿಂದ ಮಣಿಸಿ ಮೊದಲ ಬಾರಿಗೆ ಟಿ20 ಕಿರೀಟ ಮುಡಿಗೇರಿಸಿಕೊಂಡಿತು. ಗೆಲುವಿನ ಬಳಿಕ ಡ್ರೆಸ್ಸಿಂಗ್ ರೂಂ ನಲ್ಲಿ ನಡೆದ ಆಟಗಾರರ ಸಂಭ್ರಮಾಚರಣೆಯಲ್ಲಿ ಮೊದಲು ವೇಡ್ ತಮ್ಮ ಕಾಲಿನ ಶೂ ಬಿಚ್ಚಿ ಅದಕ್ಕೆ ಬಿಯರ್ ಸುರಿದು ಕುಡಿದಿದ್ದಾರೆ. ಆ ಬಳಿಕ ಸ್ಟೋಯಿನಿಸ್ ಕೂಡ ಅದೇ ರೀತಿ ಬಿಯರ್ ಕುಡಿದು ಸಂಭ್ರಮಿಸಿದ್ದಾರೆ. ಈ ಸಂಭ್ರಮದ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.










