ಅಹಮದಾಬಾದ್ : ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾದ ಮೂವರು ಆಟಗಾರರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ ಎಂದು ತಿಳಿದು ಬಂದಿದೆ.
ಲಭ್ಯವಾಗಿರುವ ಮಾಹಿತಿ ಪ್ರಕಾರ ಟೀಂ ಇಂಡಿಯಾ ಆರಂಭಿಕ ಬ್ಯಾಟರ್ ಶಿಖರ್ ಧವನ್, ಯುವ ಬ್ಯಾಟರ್ ಋತುರಾಜ್ ಗಾಯಕ್ವಾಡ್ ಹಾಗೂ ಶ್ರೇಯಸ್ ಅಯ್ಯರ್ ಗೆ ಸೋಂಕು ದೃಢಗೊಂಡಿದ್ದು, ತಂಡದ ಕೆಲ ಸಹ ಸಿಬ್ಬಂದಿಯಲ್ಲೂ ಕೋವಿಡ್ ಕಾಣಿಸಿಕೊಂಡಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ತಂಡದ 8 ಮಂದಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಫೆ.6ರಿಂದ ಅಹ್ಮದಾಬಾದ್ ನಲ್ಲಿ ಏಕದಿನ ಸರಣಿ ತದನಂತರ ಕೋಲ್ಕತ್ತಾದಲ್ಲಿ ಟಿ20 ಸರಣಿ ನಡೆಯಲಿದೆ. ಈಗಾಗಲೇ ವೆಸ್ಟ್ಇಂಡೀಸ್ ತಂಡದ ಆಟಗಾರರು ಅಹಮದಾಬಾದ್ ಗೆ ಬಂದಿಳಿದಿದ್ದು, ಮೂರು ದಿನಗಳ ಕ್ವಾರಂಟೈನ್ ನಲ್ಲಿದ್ದಾರೆ. ಇದೀಗ ಕೊರೊನಾ ದೃಢಗೊಂಡಿರುವ ಕಾರಣ ಬದಲಿ ಆಟಗಾರರನ್ನ ಬಿಸಿಸಿಐ ಘೋಷಣೆ ಮಾಡುವ ಸಾಧ್ಯತೆ ಇದೆ.










