ಟ್ರಾಫಿಕ್ ಪೊಲೀಸ್ ಗೆ ಬೈಕ್ ಸವಾರನಿಂದ ಹಲ್ಲೆ- ಬಂಧನ…

229
firstsuddi

ಮಂಗಳೂರು : ಹೆಲ್ಮೆಟ್ ಧರಿಸದೆ ಬೈಕ್ ಸವಾರಿ ಮಾಡುತ್ತಿದ್ದವನ ಬೈಕ್ ನ ಫೋಟೊ ತೆಗೆದ ಕರ್ತವ್ಯ ನಿರತ ಟ್ರಾಪಿಕ್ ಕಾನ್ ಸ್ಟೇಬಲ್ಗೆ ಬೈಕ್ ಸವಾರನು ಅವಾಚ್ಯ ಶಬ್ದಗಳಿಂದ ನಿಂದಿಸಿ,ಹಲ್ಲೆ ಮಾಡಿದ ಘಟನೆ ಶುಕ್ರವಾರ ಬೆಳಿಗ್ಗೆ ತೊಕ್ಕೊಟ್ಟು ಫ್ಲೈ ಓವರ್ ಸಮೀಪದಲ್ಲಿ ನಡೆದಿದ್ದು ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.ಹಲ್ಲೆಗೊಳಗಾದ ಪೇದೆಯನ್ನು ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣಾ ಸಿಬ್ಬಂದಿ ಸಂಗಣ್ಣ ಗೌಡ ಎಂದು ಗುರುತಿಸಲಾಗಿದೆ.ಬೈಕ್ ಸವಾರ ಮದನಿ ನಗರದ ಅಝರ್ ಎಂದು ತಿಳಿದು ಬಂದಿದ್ದು ಆತನನ್ನು ಪೊಲೀಸರು ಬಂಧಿಸಿದ್ದಾರೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ