ಡೈಮಂಡ್ ಲೀಗ್​ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ನೀರಜ್ ಚೋಪ್ರಾ.

105
firstsuddi

ಲಾಸನ್ : ಭಾರತದ ಜಾವೆಲಿನ್ ಸ್ಪರ್ಧಿ ನೀರಜ್ ಚೋಪ್ರಾ ಅವರು ಅವರು ಲಾಸನ್ ನಲ್ಲಿ ನಡೆದ ಡೈಮಂಡ್ ಲೀಗ್ ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ನೀರಜ್ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಗೆದ್ದ ಬಳಿಕ ಗಾಯಕ್ಕೆ ತುತ್ತಾಗಿದ್ದರು. ಇದರಿಂದ ಕಾಮನ್ ವೆಲ್ತ್ ಗೇಮ್ಸ್ ನಿಂದ ಹೊರಗುಳಿದಿದ್ದರು. ಇದೀಗ ಸ್ವಿಸ್ ನ ಡೈಮಂಡ್ ಲೀಗ್ ನಲ್ಲಿ 89.08 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಮೊದಲ ಸ್ಥಾನ ಪಡೆದರು.

ಮೊದಲ ಪ್ರಯತ್ನದಲ್ಲೇ ನೀರಜ್ ಈ ಸಾಧನೆ ಮಾಡಿದ್ದು, ಮುಂದಿನ ತಿಂಗಳು ಜ್ಯೂರಿಚ್ ನಲ್ಲಿ ನಡೆಯಲಿರುವ ಡೈಮಂಡ್ ಲೀಗ್ ಫೈನಲ್ ಗೆ ಅರ್ಹತೆ ಪಡೆದಿದ್ದಾರೆ.

ಇದಕ್ಕೂ ಮೊದಲು ಡೈಮಂಡ್ ಲೀಗ್ ನಲ್ಲಿ ಡಿಸ್ಕಸ್ ಎಸೆತಗಾರ ವಿಕಾಸ್ ಗೌಡ ಅಗ್ರ ಮೂರರಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯರಾಗಿದ್ದರು. ಅವರು 2012 ರಲ್ಲಿ ನ್ಯೂಯಾರ್ಕ್ನಲ್ಲಿ ಮತ್ತು 2014 ರಲ್ಲಿ ದೋಹಾದಲ್ಲಿ ನಡೆದದ ಲೀಗ್ ನಲ್ಲಿ ಎರಡನೇ ಸ್ಥಾನ ಗಳಿಸಿದ್ದರು. 2015 ರಲ್ಲಿ ಶಾಂಘೈ ಮತ್ತು ಯುಜೀನ್ ಲೀಗ್ ನಲ್ಲಿ ಮೂರನೇ ಸ್ಥಾನ ಪಡೆದಿದ್ದರು. ಇದೀಗ ನೀರಜ್ ಲೀಗ್ ನಲ್ಲಿ ಗೆಲ್ಲುವ ಮೂಲಕ ಹೊಸ ದಾಖಲೆ ಬರೆದರು.