ಅಮೆರಿಕ: ಡೋನಾಲ್ಡ್ ಟ್ರಂಪ್ ಆಡಳಿತದಲ್ಲಿ ಭಾರತ ಸಂಬಂಧಕ್ಕೆ ಆದ್ಯತೆ ನೀಡಲಾಗುತ್ತಿದೆ. ಇಂಡೋ ಫೆಸಿಫಿಕ್ ಪ್ರದೇಶದಲ್ಲಿ ಭಾರತ ಸಾಮಥ್ರ್ಯದಾಯಕ ಪರಿವರ್ತನೆ ಹೊಂದುತ್ತಿದ್ದು, ಚೀನಾದ ವಿರುದ್ಧ ಪರಿಣಾಮಕಾರಿ ಸ್ಪರ್ಧೆ ನೀಡುವಲ್ಲಿ ಪ್ರಮುಖ ಭಾಗಿದಾರ ದೇಶವಾಗಿದೆ ಎಂದು ಶ್ವೇತಭವನದ ಮಾಜಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ಯಾರಿಸ್ ಬಳಿಕ ಅಮೆರಿಕಕ್ಕೆ ತೆರಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ವಾಷಿಂಗ್ಟನ್ ಭೇಟಿಗೆ ಮುನ್ನ ಲಿಸಾ ಕರ್ಟಿಸ್ ಈ ಹೇಳಿಕೆ ನೀಡಿದ್ದಾರೆ. ಲೀಸಾ, ಟ್ರಂಪ್ ಮೊದಲ ಅವಧಿ ಆಡಳಿತದಲ್ಲಿ 2017 ರಿಂದ 2021ರವರೆಗೆ ರಾಷ್ಟ್ರೀಯ ಭದ್ರತಾ ಮಂಡಳಿಯ ದಕ್ಷಿಣ ಮತ್ತು ಕೇಂದ್ರ ಏಷ್ಯಾದ ಹಿರಿಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು. ಮೋದಿ ಆಗಮನದ ಮುನ್ನಾ ದಿನ ಸಂಜೆ ವಾಷಿಂಗ್ಟನ್ ಡಿಸಿ ಮೂಲದ ಥಿಂಕ್ ಟಾಂಕ್‍ನ ನೂತನ ಅಮೆರಿಕ ಭದ್ರತಾ ಕೇಂದ್ರ ಆನ್‍ಲೈನ್ ಭಾಷಣದಲ್ಲಿ ಕರ್ಟಿಸ್ ಮಾತನಾಡಿದ್ದು, ಭಾರತದೊಂದಿಗಿನ ಸಂಬಂಧವನ್ನು ಟ್ರಂಪ್ ಆಡಳಿತ ಸ್ಪಷ್ಟ ಆದ್ಯತೆಯನ್ನಾಗಿಸಿಕೊಂಡಿದೆ ಎಂದು ಅವರು ಹೇಳಿದ್ದಾರೆ. ಜಾಗತಿಕ ಶಕ್ತಿಯಾಗಿ ಹೊರಹೊಮ್ಮುವಲ್ಲಿ ಭಾರತವೂ ಪ್ರಮುಖವಾಗಿದೆ ಎಂದು ಗುರುತಿಸಲಾಗಿದೆ. ಅಲ್ಲದೇ ಜಗತ್ತು ಮತ್ತು ಇಂಡೋ ಫೆಸಿಫಿಕ್ ಪ್ರದೇಶದಲ್ಲಿ ಇದು ಸಾಮಥ್ರ್ಯದಾಯಕ ಪರಿವರ್ತನೆ ಹೊಂದಿದೆ ಎಂದು ಹೇಳಿದ್ದಾರೆ. ಅಮೆರಿಕದ 47ನೇ ಅಧ್ಯಕ್ಷರಾಗಿ ಅಮೆರಿಕದ ನಾಯಕ ಅಧಿಕಾರ ಸ್ವೀಕರಿಸಿದ ಕೆಲವೇ ವಾರಗಳಲ್ಲಿ ಡೋನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಿದ 4ನೇ ವಿದೇಶಿ ನಾಯಕ ಮೋದಿ ಅವರಾಗಲಿದ್ದಾರೆ. ಡೋನಾಲ್ಡ್ ಟ್ರಂಪ್ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಜಪಾನ್ ಪ್ರಧಾನಿ ಶಿಗೆರು ಇಶಿಬ ಮತ್ತು ಜೋರ್ಡನ್ ರಾಜ ಅಬ್ದುಲ್ಲಾ 2 ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಟ್ರಂಪ್ ಹೊಸ ಆಡಳಿತ, ಅಮೆರಿಕದಲ್ಲಿ ತೆಗೆದುಕೊಳ್ಳುತ್ತಿರುವ ನಿರ್ಧಾರಗಳ ಬಗ್ಗೆ ಭಾರತವೂ ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದೆ. ಈ ಬಗ್ಗೆ ಗ್ರೌಂಡ್‍ವರ್ಕ್ ಮಾಡಿರುವ ಭಾರತ ಸರ್ಕಾರ ಈ ಸಂಬಂಧ ಸಕಾರಾತ್ಮಕ ಹೆಜ್ಜೆ ಇಟ್ಟಿದ್ದು, ಸಂಬಂಧ ಸುಧಾರಣೆಗೆ ಮತ್ತಷ್ಟು ಆದ್ಯತೆ ನೀಡುವ ಬಗ್ಗೆ ಗುರುವಾರ ಸಭೆ ನಡೆಯಲಿದೆ ಎಂದು ಇದೇ ವೇಳೆ ಕರ್ಟಿಸ್ ತಿಳಿಸಿದ್ದಾರೆ.