ತಂದೆಯಿಂದಲೇ ಮಗನ ಬರ್ಬರ ಹತ್ಯೆ!

81
firstsuddi

ಕೋಲಾರ : ಚಾಕುವಿನಿಂದ ಇರಿದು ತಂದೆಯೇ ಮಗನನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಗ್ರಾಮದಲ್ಲಿ ನಡೆದಿದೆ.

ಭುವನ್ (8) ಕೊಲೆಯಾದ ಬಾಲಕ ಹಾಗೂ ಸುಬ್ರಹ್ಮಣ್ಯಂ ಎಂಬಾತ ಕೊಲೆಗೈದ ಆರೋಪಿ. ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ ಆರೋಪಿ ಸುಬ್ರಹ್ಮಣ್ಯಂ ಕಳೆದ 5 ವರ್ಷದ ಹಿಂದೆ ತನ್ನ ಪತ್ನಿಯನ್ನು ಕೊಲೆ ಮಾಡಿ ಜೈಲಿಗೆ ಹೋಗಿ ಬಂದಿದ್ದ.

ಇದೀಗ ನಿನ್ನೆ ರಾತ್ರಿ ತನ್ನ ಮಗನನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ. ಈ ಸಂಬಂಧ ಆರೋಪಿಯನ್ನು ನಂಗಲಿ ಪೊಲೀಸರು ಬಂಧಿಸಿ ಪ್ರಕರಣ ದಾಖಲು ಮಾಡಿದ್ದಾರೆ.