ತಂದೆಯ ಶವದೊಂದಿಗೆ ಮೂರು ತಿಂಗಳು ಕಳೆದ ಮಗ!

66
firstsuddi

ಕೊಲ್ಕತ್ತಾ : ತಂದೆಯ ಶವದೊಂದಿಗೆ ಮಗ ಮೂರು ತಿಂಗಳು ಕಾಲ ಕಳೆದಿರುವ ವಿಚಿತ್ರ ಘಟನೆಯೊಂದು ಕೋಲ್ಕತಾದಲ್ಲಿ ನಡೆದಿದೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ 70 ವರ್ಷದ ಸಂಗ್ರಾಮ್ ಡೇ ಎಂಬವರು ಕಳೆದ ಮೂರು ತಿಂಗಳ ಹಿಂದೆ ಸಾವನ್ನಪ್ಪಿದ್ದರು. ಆದರೆ ತಂದೆಯ ಅಂತ್ಯಕ್ರಿಯೆ ಮಾಡುವ ಬದಲು ಪುತ್ರ ಕೌಶಿಕ್ ಮೃತದೇಹದೊಂದಿಗೆ ಕಾಲ ಕಳೆಯುತ್ತಿದ್ದ. ಇನ್ನೂ ಸಂಗ್ರಾಮ್ ಡೇ ಅವರ ಪತ್ನಿ ಅರುಣಾ ಅವರು ಅನಾರೋಗ್ಯಕ್ಕೀಡಾಗಿ ಹಾಸಿಗೆ ಹಿಡಿದಿದ್ದರು. ಹೀಗಾಗಿ, ಗಂಡನ ಸಾವಿನ ಸುದ್ದಿ ಬಗ್ಗೆ ಅವರಿಗೆ ಗೊತ್ತಾಗಿಲ್ಲ. ಸಂಗ್ರಾಮ್ ಡೇ ಮನೆಯಿಂದ ಕೊಳೆತ ವಾಸನೆ ಹಾಗೂ ಕೌಶಿಕ್ ಮನೆಯಿಂದ ಹೊರಬಾರದ ಕಾರಣ ಸ್ಥಳೀಯರು ಅಲ್ಲಿಗೆ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ಲಭ್ಯವಾಗಿರುವ ಮಾಹಿತಿ ಪ್ರಕಾರ, ಪುತ್ರ ಕೌಶಿಕ್ ಮಾನಸಿಕವಾಗಿ ಸ್ಥಿಮಿತದಲ್ಲಿ ಇಲ್ಲದ ವ್ಯಕ್ತಿ ಎಂದು ಹೇಳಿರುವ ಪೊಲೀಸರು ಇದೀಗ ಶವವನ್ನು ಪೋಸ್ಟ್​ಮಾರ್ಟಮ್​​ಗೆ ಕಳಿಸಿದ್ದಾರೆ. ಇದೊಂದು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈಗಾಗಲೇ ಮಗನನ್ನು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಯುತ್ತಿದೆ.