ತಮಿಳುನಾಡಿಗೆ 4 ವಿಕೆಟ್‍ಗಳ ರೋಚಕ ಜಯ – ಕರ್ನಾಟಕಕ್ಕೆ ಸೋಲು…

113
firstsuddi

ನವದೆಹಲಿ : ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಫೈನಲ್ ಪಂದ್ಯದಲ್ಲಿ ತಮಿಳುನಾಡು ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಕೊನೆಯ ಎಸೆತದಲ್ಲಿ ಶಾರುಖ್ ಖಾನ್ ಸಿಡಿಸಿದ ಅದ್ಭುತ ಸಿಕ್ಸರ್ ನಿಂದ ಕರ್ನಾಟಕ ವಿರುದ್ಧ ತಮಿಳುನಾಡು 4 ವಿಕೆಟ್ ಗಳ ರೋಚಕ ಜಯ ಸಾಧಿಸಿದೆ.

ಸೋಮವಾರ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 151ರನ್ ಗಳಿಸಿತ್ತು. ಇದನ್ನು ಬೆನ್ನಟ್ಟಿದ ತಮಿಳುನಾಡು 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 153 ರನ್ ಹೊಡೆದು ಜಯಗಳಿಸಿತು.

ಕೊನೆಯ ಓವರ್ ನಲ್ಲಿ ತಮಿಳುನಾಡು ತಂಡಕ್ಕೆ 16 ರನ್ಗಳ ಅವಶ್ಯಕತೆಯಿತ್ತು. ಪ್ರತೀಕ್ ಜೈನ್ ಎಸೆದ ಅಂತಿಮ ಓವರ್ನ ಮೊದಲ ಎಸೆತದಲ್ಲಿ ಸಾಯಿ ಕಿಶೋರ್ ಬೌಂಡರಿ ಬಾರಿಸಿದರು. 2ನೇ ಎಸೆತದಲ್ಲಿ 1 ರನ್. ಕೊನೆಯ 3 ಎಸೆತಗಳಲ್ಲಿ 9 ರನ್ ಬೇಕಿತ್ತು. ಈ ವೇಳೆ ಸಾಯಿ ಕಿಶೋರ್ ಸಿಂಗಲ್ ತೆಗೆದರು. ಅಂತಿಮ 2 ಎಸೆತಗಳಲ್ಲಿ 8 ರನ್ ಗಳ ಅವಶ್ಯಕತೆ. ಇದೇ ವೇಳೆ ಪ್ರತೀಕ್ ಜೈನ್ ವೈಡ್ ಎಸೆದರು. ಅದರಂತೆ ಕೊನೆಯ 2 ಎಸೆತಗಳಲ್ಲಿ 7 ರನ್ ಗಳಗುರಿ ಪಡೆಯಿತು. ಈ ವೇಳೆ ಶಾರೂಖ್ ಖಾನ್ 2 ರನ್ ಕಲೆಹಾಕಿದರು. ಅಂತಿಮ ಎಸೆತದಲ್ಲಿ 5 ರನ್ಗಳು ಬೇಕಿತ್ತು. ಈ ವೇಳೆ ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ಶಾರುಖ್ ಖಾನ್ ತಮಿಳುನಾಡು ತಂಡಕ್ಕೆ 4 ವಿಕೆಟ್ ಗಳ ರೋಚಕ ಜಯ ತಂದುಕೊಟ್ಟರು. ಈ ಮೂಲಕ ತಮಿಳುನಾಡು ಮೂರನೇ ಬಾರಿ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.