ನವದೆಹಲಿ : ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅಂದ್ರೆ ಯಾರಿಗೆ ಇಷ್ಟ ಇಲ್ಲ. ಅಭಿಮಾನಿಗಳು ಮೈಮೇಲೆ ಟ್ಯಾಟೂ ಹಾಕಿಸುವುದು. ಕೊಹ್ಲಿ ಚಿತ್ರ ಇರುವ ಬಟ್ಟೆ ಧರಿಸುವುದು ಹೀಗೆ ನಾನಾ ರೀತಿಯಲ್ಲಿ ಅಭಿಮಾನಿಗಳು ತಮ್ಮ ಅಭಿಮಾನವನ್ನು ವ್ಯಕ್ತಪಡಿಸುತ್ತಾರೆ. ಆದರೆ ಇಲ್ಲೊಬ್ಬ ಅಭಿಮಾನಿ ವಿಶೇಷವಾಗಿ ಅಭಿಮಾನ ಮೆರೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ವಿರಾಟ್ ಕೊಹ್ಲಿ ಅವರ ಪಕ್ಕಾ ಅಭಿಮಾನಿಯಾಗಿರುವ ಚಿರಾಗ್ ಎಂಬುವವರು ತಮ್ಮ ತಲೆಯಲ್ಲಿ ವಿರಾಟ್ ಕೊಹ್ಲಿ ಅವರ ಚಿತ್ರವಿರುವ ಕೇಶ ವಿನ್ಯಾಸವನ್ನು ಮಾಡಿಕೊಂಡಿದ್ದಾರೆ. ಮಂಗಳವಾರ ನಡೆದ ಇಂಡಿಯಾ-ಆಸ್ಟ್ರೇಲಿಯಾ ಪಂದ್ಯ ವೀಕ್ಷಿಸಲು ಆಗಮಿಸಿದ ಚಿರಾಗ್ ತಮ್ಮ ತಲೆ ಹಿಂಬದಿಯಲ್ಲಿ ಕೊಹ್ಲಿ ಚಿತ್ರವನ್ನು ಬಿಡಿಸಿಕೊಂಡು ಬಂದು ಎಲ್ಲರ ಗಮನ ಸೆಳೆದಿದ್ದಾರೆ. ಬಳಿಕ ಮಾತನಾಡಿದ ಚಿರಾಗ್ ಅವರು, ನಾನು ವಿರಾಟ್ ಕೊಹ್ಲಿಯ ಕಟ್ಟಾ ಅಭಿಮಾನಿ. ನಾನು ಅವರನ್ನು ಒಮ್ಮೆಯಾದರೂ ನೇರವಾಗಿ ಭೇಟಿ ಮಾಡಬೇಕು. ಅಲ್ಲದೇ ಭೇಟಿ ಮಾಡಿದ ಕ್ಷಣ ಅವರ ಕಾಲಿಗೆ ಬಿದ್ದು ನಮಸ್ಕರಿಸಬೇಕು ಎಂದು ಹೇಳಿದ್ದಾರೆ.










