ಚಿಕ್ಕಮಗಳೂರು : ಕಡೂರು ತಾಲ್ಲೂಕು ಸಿಂಗಟಗೆರೆಯ ಶ್ರೀ ಕಲ್ಲೇಶ್ವರ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಎಸ್.ಡಿ.ಚಂದ್ರಶೇಖರ್ ಅವರು ಮಂಡಿಸಿದ ಸಂಶೋಧನಾ ಮಹಾ ಪ್ರಬಂಧಕ್ಕೆ ತುಮಕೂರು ವಿಶ್ವ ವಿದ್ಯಾನಿಲಯ ಪಿ.ಹೆಚ್.ಡಿ. ಪದವಿ ನೀಡಿದೆ.
ಕಡೂರು ತಾಲ್ಲೂಕಿನ ಶ್ರೀರಾಮಪುರದ ನಿವೃತ್ತ ಮುಖ್ಯ ಶಿಕ್ಷಕ ಧರ್ಮಪ್ಪ ಹಾಗೂ ನಾಗರತ್ನಮ್ಮ ಅವರ ಪುತ್ರರಾಗಿರುವ ಎಸ್.ಡಿ.ಚಂದ್ರಶೇಖರ್ ಅವರು ಬಿ.ಎಂ.ಎಸ್. ಅಕಾಡೆಮಿ ಆಫ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್‍ನ ಸಹ ಪ್ರಾಧ್ಯಾಪಕಿ ಡಾ|| ಎಸ್.ಶೀಲಾದೇವಿ ಮಳಿಮಠ ಅವರ ಮಾರ್ಗದರ್ಶನದಲ್ಲಿ ಚಿಕ್ಕಮಗಳೂರು ತಾಲ್ಲೂಕಿನ ಜನಪದ ಕಲೆಗಳ ಸಾಂಸ್ಕøತಿಕ ಅಧ್ಯಯನ ವಿಷಯ ಕುರಿತು ಸಂಶೋಧನಾ ಪ್ರಬಂಧ ಮಂಡಿಸಿದ್ದರು.
ಮಾರ್ಚ್ ತಿಂಗಳಿನಲ್ಲಿ ನಡೆಯಲಿರುವ ತುಮಕೂರು ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್ ಚಂದ್ರಶೇಖರ್ ಅವರಿಗೆ ಡಾಕ್ಟರೇಟ್ ಪ್ರಧಾನ ಮಾಡಲಿದ್ದಾರೆ.










