ವಾಯ್ಸ್ ಸಂದೇಶ ಕಳುಹಿಸಿ ಬಿಎಂಟಿಸಿ ಸಿಬ್ಬಂದಿ ಆತ್ಮಹತ್ಯೆ…

71
firstsuddi

ಬೆಂಗಳೂರು : ವಾಯ್ಸ್ ಸಂದೇಶ ಕಳುಹಿಸಿ ಬಿಎಂಟಿಸಿ ಸಿಬ್ಬಂದಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.

ಬಿಎಂಟಿಸಿ ಘಟಕ-41ರ ಚಾಲಕ ಜಟ್ಟಪ್ಪ ಪಟೇಲ ಆತ್ಮಹತ್ಯೆ ಮಾಡಿಕೊಂಡಿದ್ದು, ನಿಯಂತ್ರಣಾಧಿಕಾರಿಗಳ ವಿರುದ್ಧ ಮಾನಸಿಕ ಕಿರುಕುಳ ಆರೋಪ ಮಾಡಿದ್ದಾರೆ.

ನಿಯಂತಣಾಧಿಕಾರಿಗಳು ಹಾಗೂ 41ನೇ ಡಿಪೋ ಅಧಿಕಾರಿಗಳು ಬಹಳ ತೊಂದರೆ ಕೊಟ್ಟಿದ್ದಾರೆ. ಲಂಚ ಕೊಡದಿದ್ದಕ್ಕೆ ಬೇರೆ ಡಿಪೋಗೆ ವರ್ಗಾವಣೆ ಮಾಡುತ್ತೇನೆ ಎಂದು ಬೆದರಿಸಿದ್ದಾರೆ. ಡಿಪೋ 6 ರಿಂದ 15ಕ್ಕೆ ವರ್ಗಾವಣೆ, 21ರಿಂದ 41ಕ್ಕೆ ವರ್ಗಾವಣೆ ಮಾಡುತ್ತೇನೆ ಎಂದಿದ್ದಾರೆ ಎಂದು ವಾಯ್ಸ್ ರೆಕಾರ್ಡ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.