ದಂತ ವೈದ್ಯನಿಗೆ ಚಾಕು ಇರಿತ : ವ್ಯಕ್ತಿಯ ಬಂಧನ…

118
Firstsuddi

ಕಲಬುರಗಿ : ಹಾಡಹಗಲೇ ವ್ಯಕ್ತಿಯೊಬ್ಬ ದಂತ ವೈದ್ಯರ ಹೊಟ್ಟೆಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದಿನ ಸಿದ್ದಗಂಗಾ ಡೆಂಟಲ್ ಆಸ್ಪತ್ರೆ ಮುಂದೆ ನಡೆದಿದೆ.

ಡಾ. ವಿಶ್ವನಾಥ್ ಪಾಟೀಲ್ ಅವರು ಚಾಕು ಇರಿತಕ್ಕೊಳಗಾದ ವೈದ್ಯರು. ಇವರು ರಸ್ತೆ ಬದಿ ಕಾರು ನಿಲ್ಲಿಸಿ ಆಸ್ಪತ್ರೆಗೆ ಹೋಗುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾನೆ. ವಿಶ್ವನಾಥ್ ಹೊಟ್ಟೆಯಿಂದ ರಕ್ತಸ್ರಾವವಾಗಿದೆ.

ಚಾಕು ಇರಿದ ವ್ಯಕ್ತಿಯ ಬಳಿ ನೋಟ್ ಬುಕ್ ಪತ್ತೆಯಾಗಿದೆ. ಇದರಲ್ಲಿ ಡಾ.ವಿಶ್ವನಾಥ್ ಅವರ ಬಗ್ಗೆ ಬರೆದುಕೊಂಡಿದ್ದು, ಹಳೆಯ ದ್ವೇಷಕ್ಕೆ ಚಾಕು ಇರಿದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಸ್ಟೇಷನ್ ಬಜಾರ್ ಠಾಣೆ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ.