ಬಿಎಸಿ ಸಭೆಗೆ ಯಾವ ಸ್ವಾರ್ಥಕ್ಕೆ ಹೋಗಬೇಕು, ಸದ್ಯ ಹೋಗುವುದಿಲ್ಲ : ಸಿದ್ದರಾಮಯ್ಯ.

96
Firstsuddi

ಬೆಂಗಳೂರು : ಬಿಎಸಿ ಸಭೆಗೆ ಯಾವ ಸ್ವಾರ್ಥಕ್ಕೆ ಹೋಗಬೇಕು, ಸದ್ಯ ಹೋಗುವುದಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಸರ್ಕಾರ ಹೇಳಿದ ಹಾಗೆ ಅವರು ನಿರ್ಧಾರ ಕೈಗೊಳ್ಳುತ್ತಾರೆ. ಒಂದು ರಾಷ್ಟ್ರ, ಒಂದು ಚುನಾವಣೆ ಬಗ್ಗೆ ನೋಡೋಣ ಎಂದು ಹೇಳಿದ್ದೆವು. ಆದರೆ ಚರ್ಚೆ ಮಾಡೋಣ ಅಂತ ಎಲ್ಲಿಯೂ ಹೇಳಿರಲಿಲ್ಲ. ನಾವು ಬಿಎಸಿ ಸಭೆಗೆ ಸದ್ಯ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸಚಿವ ಜಾರಕಿಹೊಳಿ ಅವರ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ನೀವು ಜಾರಕಿಹೊಳಿಯವರನ್ನೇ ಕೇಳಿಕೊಳ್ಳಿ ಎಂದರು.